ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳಿಗೆ ಜ್ಞಾನ ನೀಡುವ ಕಾರ್ಯಕ್ರಮವಾಗಬೇಕು – ತಾ.ಪಂನಲ್ಲಿ ‘ಆಡಳಿತದಲ್ಲಿ ಮಕ್ಕಳು’ ಸರಕಾರದೊಡನೆ ಮಕ್ಕಳ ಭಾಗವಹಿಸುವಿಕೆ ಕಾರ್ಯಗಾರ

0

ಪುತ್ತೂರು: ಮಕ್ಕಳ ಹಕ್ಕುಗಳು ಕೇವಲ ಮಕ್ಕಳ ಗ್ರಾಮಸಭೆಗೆ ಮಾತ್ರ ಸೀಮಿತವಾಗಬಾರದು. ಪ್ರತಿಯೊಂದು ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎಂಬ ಮನೋಭಾವನೆ ಮಕ್ಕಳಲ್ಲಿ ಬರಿಸಬೇಕು ಇದು ಸ್ಥಳೀಯ ಸರಕಾರಕ್ಕೆ ಜವಾಬ್ದಾರಿ ಎಂದು ಚೈಲ್ಡ್ ರೈಟ್ ಟ್ರಸ್ಟ್‌ನ ಯೋಜನಾ ಸಹಾಯಕ ಕೌಶಿಕ್ ಅವರು ಮಾಹಿತಿ ನೀಡಿದರು.

ಸರಕಾರದೊಡನೆ ಮಕ್ಕಳ ಭಾಗವಹಿಸುವಿಕೆ ವಿಷಯದ ಕುರಿತು ‘ಆಡಳಿತದಲ್ಲಿ ಮಕ್ಕಳು’ ಎಂಬ ಕಾರ್ಯಕ್ರಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಚೈಲ್ಡ್ ರೈಟ್ ಟ್ರಸ್ಟ್ ಇದರ ಸಹಯೋಗದೊಂದಿಗೆ ಆ.೨೪ರಂದು ಪುತ್ತೂರು ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆಯಿತು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೈಲ್ಡ್ ರೈಟ್ ಟ್ರಸ್ಟ್‌ನ ಯೋಜನಾ ಸಹಾಯಕ ಕೌಶಿಕ್ ಅವರು ವಿವಿಧ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿಯ ಮೂಲಕ ಮಕ್ಕಳಿಗೆ ಮತ್ತು ಮಹಿಳೆಯರಿಗೆ ನೆಮ್ಮದಿ ಮತ್ತು ಶಾಂತಿಯ ಪರಿಸರವನ್ನು ಕಾಪಾಡುವ ಜವಾಬ್ದಾರಿ ಇರಬೇಕು. ಬಾಲಕಾರ್ಮಿಕರು ಬಾಲ್ಯ ವಿವಾಹ ಪೋಕ್ಸೋ ಕಾಯ್ದೆ ಹೆಣ್ಣು ಮಕ್ಕಳ ಸಮಸ್ಯೆಗಳು ಈ ಕುರಿತು ಪ್ರತಿ ಗ್ರಾಮ ಪಂಚಾಯಿತಿನಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ವಿಶೇಷವಾಗಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಹಾಗೂ ಮಹಿಳಾ ಸ್ನೇಹಿ ಗ್ರಾಮ ಪಂಚಾಯತಿ ರಚನೆಯಾಗಬೇಕು. ೧೭ ಅಂಶಗಳನ್ನು ಒಳಗೊಂಡ ಸುಸ್ಥಿರ ಅಭಿವೃದ್ಧಿಯ ಗುರಿ ಪೂರೈಸಲು ವಿಶೇಷವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳಿಗೆ ಜ್ಞಾನವನ್ನು ನೀಡಬೇಕು. ಮಕ್ಕಳ ಹಕ್ಕುಗಳ ಗ್ರಾಮ ಸಭೆಯ ಕುರಿತು ಗ್ರಾಮ ಪಂಚಾಯಿತಿಗಳಲ್ಲಿ ಪ್ರಚಾರ, ತಯಾರಿ, ನಡೆಯಬೇಕಿದೆ

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವುದು ಮತ್ತು ಸರಕಾರದ ಸವಲತ್ತುಗಳನ್ನು ಪಡೆಯಬೇಕಾದಲ್ಲಿ ಕಡ್ಡಾಯವಾಗಿ ಮಕ್ಕಳ ಹೆತ್ತವರು ಜನನ ಪ್ರಮಾಣಪತ್ರವನ್ನು ಪಡೆಯುವುದು. ಹಾಗೂ ವಯಸ್ಸಿನ ಮಾನದಂಡಕ್ಕೆ ಶಾಲಾ ಸರ್ಟಿಫಿಕೇಟ್ ಗಳೇ ಮುಖ್ಯ ಎಂಬ ಕುರಿತು ಮಾಹಿತಿ ನೀಡಲಾಯಿತು. ತಾ.ಪಂ ಯೋಜನಾಧಿಕಾರಿ ಸುಕನ್ಯಾ, ಸಹಾಯಕ ನಿರ್ದೇಶಕರಾದ ಶೈಲಜಾ ಭಟ್, ಟ್ರಸ್ಟ್ ನ ಸುಗಮಕಾರರಾದ ರಮ್ಯ, ಮೇಲ್ವಿಚಾರಕರಾದ ಸ್ಫೂರ್ತಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಕುರಿತು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here