ಪುತ್ತೂರು: ಕೇಂದ್ರ ಸರಕಾರದ ಆದೇಶದಡಿಯಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ನಡೆಯುವ ದ.ಕ.ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ (ದಿಶಾ) ಸಮಿತಿಗೆ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ರಾಮದಾಸ್ ಹಾರಾಡಿ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ ಎಂದು ದ.ಕ.ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶ ಪತ್ರ ಕಳುಹಿಸಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಸಂಜೀವ ಮಠಂದೂರು ಅವರ ಶಿಫಾರಸ್ಸಿನಂತೆ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ರಾಮ್‌ದಾಸ್ ಹಾರಾಡಿಯವರು ಸುಮಾರು ೩೫ ವರ್ಷಗಳಿಗೂ ಮಿಕ್ಕಿ ಸಂಘ ಪರಿವಾರದಲ್ಲಿ ಸಕ್ರೀಯರಾಗಿದ್ದು, ಬಿಜೆಪಿಯಲ್ಲಿ ತಳಮಟ್ಟದಿಂದ ಬೂತ್ ಕಾರ್ಯಕರ್ತರಾಗಿ, ಬೂತ್ ಅಧ್ಯಕ್ಷರಾಗಿ, ಪುತ್ತೂರು ನಗರ ಮಂಡಲದ ಕಾರ್ಯದರ್ಶಿಯಾಗಿ, ೨ ಬಾರಿ ಪ್ರಧಾನ ಕಾರ್ಯದರ್ಶಿಯಾಗಿ, ನಗರ ಆಶ್ರಯ ಸಮತಿ ಮಾಜಿ ಸದಸ್ಯರಾಗಿ, ವಿವಿಧ ಧಾರ್ಮಿಕ, ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.