ಪುತ್ತೂರು:ಬೀಡಿಕಾರ್ಮಿಕರ 2021-22ನೇ ಸಾಲಿನ ಬೀಡಿಗಳ ಲೆಕ್ಕಾಚಾರದಲ್ಲಿ ಪ್ರತಿ 1000 ಬೀಡಿಗೆ ರೂ.35.36ರಂತೆ ಒಂದು ಲಕ್ಷ ಬೀಡಿಗೆ ರೂ.3,536ರಂತೆ ಬೋನಸ್ ಈ ತಿಂಗಳಿಂದ ವಿತರಣೆ ಆಗುತ್ತಿದೆ ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ಗುಡ್ಡಪ್ಪ ಗೌಡ, ಉಪಾಧ್ಯಕ್ಷ ಕೇಶವ ಗೌಡ, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಹಾಗೂ ಖಜಾಂಜಿ ಈಶ್ವರಿ ತಿಳಿಸಿದ್ದಾರೆ.
ರೂ.215.22ರ 8.33% ಬೋನಸ್ 17.93, ರಜಾ ಸಂಬಳ 5%ದಂತೆ ರೂ.10.76 ಮತ್ತು ಹಬ್ಬದ ರಜಾ ಸಂಬಳ 3.10%ನಂತೆ ರೂ.6.67 ಒಟ್ಟು ಬೋನಸ್ ಜೊತೆ ಪ್ರತಿ ಸಾವಿರ ಬೀಡಿಗೆ ರೂ.35.36ರಂತೆ ಈ ವರ್ಷ ಬೀಡಿ ಕಂಪೆನಿಗಳು ಬೀಡಿ ಕಾರ್ಮಿಕರಿಗೆ ನೀಡುತ್ತಿವೆ.ಸರಕಾರ ನಿಗದಿಗೊಳಿಸಿದ ವೇತನ ಪ್ರತಿ 1000 ಬೀಡಿಗೆ 2021-22ನೇ ಸಾಲಿನಲ್ಲಿ 255.22ರಂತೆ ಸಿಗಬೇಕಿದ್ದು ಇದರ ಪ್ರಕಾರ ಬೀಡಿಕಾರ್ಮಿಕರಿಗೆ ಪ್ರತಿ 1000 ಬೀಡಿಗೆ ರೂ.41.93ರಂತೆ ಬೋನಸ್ ನೀಡಬೇಕಾಗಿತ್ತು.ಬೀಡಿ ಮಾಲಕರು ಸರಕಾರ ನಿಗದಿಗೊಳಿಸಿದ ವೇತನವನ್ನು ಜಾರಿಮಾಡದೆ ಪ್ರತಿ 1000 ಬೀಡಿಯಲ್ಲಿ ರೂ.40ರಂತೆ ಕಡಿತ ಮಾಡಿ ವೇತನ ನೀಡುತ್ತಿದ್ದಾರೆ.ಆದ್ದರಿಂದ ಈಗ ಪ್ರತಿ 1000 ಬೀಡಿಗೆ ರೂ.35.36ರಂತೆ ಮಾತ್ರ ಬೋನಸ್ ಸಿಗುವುದಾಗಿದೆ. ಬೀಡಿ ಕೆಲಸ ಬಿಟ್ಟ ಬೀಡಿಕಾರ್ಮಿಕರು ತಮ್ಮ ಪ್ರೊವಿಡೆಂಟ್ ಫಂಡನ್ನು ಕ್ಲೈಮ್ ಮಾಡಿ ಪಡೆಯುವುದರ ಜೊತೆಗೆ ಬೀಡಿಕಾರ್ಮಿಕರಿಗೆ ಬೀಡಿ ಮಾಲಕರು ಗ್ರಾಚ್ಯುವಿಟಿ ನೀಡಬೇಕಾದ್ದು ಅವರ ಕರ್ತವ್ಯ. ಅದನ್ನು ಪಡೆದುಕೊಳ್ಳುವುದು ಬೀಡಿಕಾರ್ಮಿಕರ ಕಾನೂನು ಬದ್ದ ಹಕ್ಕು.ಆದರೆ ಮಾಲಕರು ಈ ಗ್ರಾಚ್ಯುವಿಟಿ ನೀಡದೆ ವಂಚನೆ ಮಾಡುತ್ತಿರುವುದು ಹಾಗೂ ಕಾರ್ಮಿಕ ಇಲಾಖೆ ಮಾಲಕರ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳದಿರುವುದು ವಿಷಾದನೀಯ.ಈ ಎಲ್ಲದರ ಬಗ್ಗೆ ಮಾಹಿತಿ ಬೇಕಾದರೆ ಅಥವಾ ವಂಚನೆಗಳಾದರೆ ನಮ್ಮ ಸಂಘಕ್ಕೆ ದೂರು ನೀಡಬಹುದು.ಸಂಘದ ಮುಖಂಡರ ಫೋನ್ ನಂಬ್ರ 9448155980, 8792591538, ಆಗಿರುತ್ತದೆ ಎಂದು ಬಿ.ಎಂ.ಭಟ್ ತಿಳಿಸಿದ್ದಾರೆ.