ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಕುಂಬ್ರ ಶಾಖೆ ಇದರ ವತಿಯಿಂದ ಆ. 31 ರಂದು ಕುಂಬ್ರ ಎಂ ಎ ಆರ್ಕೆಡ್‌ನಲ್ಲಿ ಸ್ಕಾಲರ್ ಶಿಫ್ ಅಭಿಯಾನ ನಡೆಯಿತು.
ಅಭಿಯಾನವನ್ನು ಕುಂಬ್ರ ಶಾಖೆ ಎಸ್ಕೆ ಎಸ್ಸೆಸ್ಸೆಫ್ ಅಧ್ಯಕ್ಷರಾದ ಶುಕೂರ್ ದಾರಿಮಿ ಉದ್ಘಾಟಿಸಿ ಮಾತನಾಡಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರೈಸ್ತ , ಜೈನ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಸರಕಾರ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ವಿದ್ಯಾರ್ಜನೆಗಾಗಿ ಸರಕರ ನೀಡುವ ಈ ಸೌಲಭ್ಯದಿಂದ ಯರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ. ಮಾಹಿತಿ ಕೊರತೆ ಮತ್ತು ದಾಖಲೆಯ ಕೊರತೆಯಿಂದ ಕೆಲವೊಂದು ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗುತ್ತಿದ್ದಾರೆ ಅಂಥ ವಿದ್ಯಾರ್ಥಿಗಳಿಗೆ ಈ ಅಭಿಯಾನ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು. ಅಭಿಯಾನದಲ್ಲಿ ಒಟ್ಟು 75 ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಕ್ರಮದಲಿಕುಂಬ್ರ ಶಾಖಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಝುಹುರಿ ಪರ್ಪುಂಜ, ಸಾದಿಕ್ ಮುಸ್ಲಿಯಾರ್ ಹನೀಫಿ, ಮಹಮ್ಮದ್ ಪಿಕೆ ಕೂಡುರಸ್ತೆ, ಬಶೀರ್ ಕಡ್ತಿಮಾರ್, ಅಬ್ದುಲ್ಲ ಬೊಳ್ಳಾಡಿ, ಕೋಸಾಧಿಕಾರಿ ಲತೀಫ್ ಬೊಳ್ಳಾಡಿ, ಮಹಮ್ಮದ್ ಬೊಳ್ಳಾಡಿ, ಝಕರಿಯ್ಯಾ ಕೊಯಿಲಗುಡ್ಡೆ, ಮಜೀದ್ ಬಾಳಯ ಉಪಸ್ಥಿತರಿದ್ದರು. ಕುಂಬ್ರ ಶಾಖಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಝುಹುರಿ ಸ್ವಾಗತಿಸಿದರು.ಬಶೀರ್ ಕೌಡಿಚ್ಚಾರ್ ವಂದಿಸಿದರು.