ಪುತ್ತೂರು: ಬೆಂಗಳೂರು ಗ್ರಾಮೀಣ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಆ.26 ರಿಂದ 28ರ ವರೆಗೆ ಜರಗಿದ ರಾಜ್ಯಮಟ್ಟದ ಜ್ಯೂನಿಯರ್ ಮತ್ತು ಸೀನಿಯರ್ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಕಂಚಿನ ಪದಕ ಪಡೆದಿರುತ್ತಾರೆ.
ವಿದ್ಯಾರ್ಥಿನಿಯರಾದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಎಂ.ಎಸ್ ಚೈತನ್ಯರವರು 400ಮೀ. ಹರ್ಡಲ್ಸ್‌ನಲ್ಲಿ ಕಂಚಿನ ಪದಕ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವರ್ಷಾರವರು ಹ್ಯಾಮರ್ ತ್ರೋನಲ್ಲಿ ಕಂಚಿನ ಪದಕ ಹಾಗೂ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಕೆ.ಶ್ರೀವರ್ಧನರವರು 5000ಮೀ ನಡಿಗೆಯಲ್ಲಿ ಕಂಚಿನ ಪದಕವನ್ನು ಗಳಿಸಿರುತ್ತಾರೆ.
ಎಂ.ಎಸ್ ಚೈತನ್ಯರವರು ಶಾಂತಿಗೋಡು-ಮರಕ್ಕೂರು ಎಂ.ಶ್ರೀಧರ ಪೂಜಾರಿ ಮತ್ತು ವನಜಾಕ್ಷಿ ದಂಪತಿ ಪುತ್ರಿ. ವರ್ಷಾರವರು ದರ್ಬೆ ನಿವಾಸಿ ಸುಂದರ ಗೌಡ ಹಾಗೂ ವಾರಿಜ ದಂಪತಿ ಪುತ್ರಿ. ಕೆ.ಶ್ರೀವರ್ಧನರವರು ದರ್ಬೆ ನಿವಾಸಿ ಸುನಿಲ್ ಕುಮಾರ್ ಕೆ ಹಾಗೂ ಪ್ರಭಿಷಾ ಬಿ ದಂಪತಿ ಪುತ್ರಿ. ಈ ಮೂವರು ವಿದ್ಯಾರ್ಥಿನಿಯರ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರು ಅಭಿನಂದಿಸಿರುತ್ತಾರೆ.