ಕೊಯಿಲ: ಕೊಯಿಲ ಗ್ರಾಮದ ವಳಕಡಮ ಶ್ರೀದೇವಿ ಭಜನಾ ಮಂದಿರದಲ್ಲಿ 5ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ವೇ.ಮೂ.ವೆಂಕಟ್ರಮಣ ಕುದ್ರೆತ್ತಾಯರ ನೇತೃತ್ವದಲ್ಲಿ ನಡೆಯಿತು.
ಪೂರ್ವಾಹ್ನ 1೦ ಗಂಟೆಗೆ ಶ್ರೀದೇವರ ವಿಗ್ರಹ ಪ್ರತಿಷ್ಠಾಪನೆಗೊಂಡು ಗಣಹೋಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಗಣೇಶೋತ್ಸವ ಸಮಿತಿ ಅಧ್ಯಕ್ಷ ಆನಂದ ಗೌಡ ಗುಂಡಿಜೆಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಯದುಪತಿ ಗೌಡರವರು ಧಾರ್ಮಿಕ ಉಪನ್ಯಾಸ ನೀಡಿದರು. ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆದ್ದೊಟ್ಟೆ ಸಂದರ್ಭೋಚಿತವಾಗಿ ಮಾತನಾಡಿದರು. ಗಣೇಶೋತ್ಸವ ಸಮಿತಿಯ ಪ್ರಮುಖರಾದ ಶೀನಪ್ಪ ಗೌಡ, ಸೀತಾರಾಮ ಗೌಡ, ಕೊರಗಪ್ಪ ಗೌಡ, ಉಮಣ ಗೌಡ, ದಿನೇಶ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಊರ ಪವಿತ್ರ ಪಾಣಿಗಳಾದ ವೇದಮೂರ್ತಿ ವೆಂಕಟರಮಣ ಕುದ್ರೇತಾಯರವರಿಗೆ ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ರಾಧಿಕಾ ಕೆ.ಪ್ರಾರ್ಥಿಸಿದರು. ಚೈತನ್ಯ ಸ್ವಾಗತಿಸಿ ಜಯಂತ್ ವಂದಿಸಿದರು. ಉಮೇಶ್ ಗೌಡ ನಿರೂಪಿಸಿದರು. ಸಂಜೆ ವಳಕಡಮ ಶ್ರೀ ದೇವಿ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ೫ಕ್ಕೆ ಶ್ರೀದೇವರಿಗೆ ಮಹಾಮಂಗಳಾರತಿ ನಡೆದು ಶೋಭಾಯಾತ್ರೆಯ ಮೂಲಕ ತೆರಳಿ ಕುಮಾರಧಾರ ನದಿಯಲ್ಲಿ ದೇವರ ವಿಗ್ರಹ ವಿಸರ್ಜನೆ ಮಾಡಲಾಯಿತು.