ಪುತ್ತೂರು: ಅಕ್ವಾಟಿಕ್ ಕ್ಲಬ್ ವತಿಯಿಂದ ಪರ್ಲಡ್ಕ ಡಾ| ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಜಿಲ್ಲಾ ಮಟ್ಟದ ಇಂಟರ್ ಕ್ಲಬ್ ಈಜು ಮತ್ತು ಜೀವರಕ್ಷಕ ಕೌಶಲ್ಯ ಸ್ಪರ್ಧೆ ಹಾಗೂ ದೇಶದಲ್ಲಿ ಮೊದಲ ಬಾರಿ ಅಂತರ‍್ರಾಷ್ಟ್ರೀಯ ದರ್ಜೆಯ ಈಜು ಸ್ಪರ್ಧೆ ಸ್ಕಿನ್ಸ್ ರೇಸಿಂಗ್ ಆಯೋಜಿಸಲಾಗಿತ್ತು. ಜಿಲ್ಲೆಯ 7 ವಿವಿಧ ಕ್ಲಬ್‌ಗಳಿಂದ 182 ಈಜುಪಟುಗಳು 134 ಈವೆಂಟ್‌ಗಳಲ್ಲಿ ಪಾಲ್ಗೊಂಡಿದ್ದರು.
ವಿ ಒನ್ ಅಕ್ವಾಟಿಕ್ ಕ್ಲಬ್‌ಗೆ ಚಾಂಪಿಯನ್‌ಶಿಪ್: ಜಿಲ್ಲಾ ಮಟ್ಟದ ಸ್ಪರ್ಧೆಯ ಚಾಂಪಿಯನ್‌ಶಿಪ್ ಮಂಗಳೂರಿನ ವಿ ಒನ್ ಅಕ್ವಾಟಿಕ್ ಕ್ಲಬ್ 280 ಪಾಯಿಂಟ್‌ಗಳೊಂದಿಗೆ ಗೆದ್ದುಕೊಂಡಿತು ಮತ್ತು ಮಂಗಳಾ ಈಜು ಕ್ಲಬ್ 184 ಪಾಯಿಂಟ್ ಗಳೊಂದಿಗೆ ರನ್ನರ್ ಆಪ್ ಪಡೆದು ಪುತ್ತೂರು ಅಕ್ವಾಟಿಕ್ ಕ್ಲಬ್ 99 ಅಂಕ ಪಡೆದು ಮೂರನೇ ಸ್ಥಾನ ಪಡೆದಿದೆ.
ಪುತ್ತೂರು ಅಕ್ವಾಟಿಕ್ ಕ್ಲಬ್ ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು ತರಬೇತುದಾರರಾದ ಪಾರ್ಥ ವಾರಣಾಶಿ, ರೋಹಿತ್ ಮತ್ತು ದೀಕ್ಷಿತ್ ಸಹಕರಿಸಿದರು.
ಮೆಡಲಿಸ್ಟ್ ಹಾಗೂ ನಾನ್ ಮೆಡಲಿಸ್ಟ್ ಗಳು ಸೇರಿ 5 ವರ್ಷದಿಂದ ಮುಕ್ತ ವಿಭಾಗದವರೆಗೆ ಈಜುಗಾರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಈಜುಪಟುಗಳ ಪದಕ ವಿಜೇತರ ವಿವರಣೆ: ಸಿಯ ಭವಿನ್ ಸಾವ್ಜನಿ : 2 ಚಿನ್ನ, 1 ಬೆಳ್ಳಿ , ಅನ್ವಿತ್ ರೈ ಬಾರಿಕೆ: 2 ಕಂಚು ಪ್ರತ್ಯೂಷ್ ಎಲ್ ಎಸ್ ಗೌಡ : 1 ಚಿನ್ನ , 2 ಬೆಳ್ಳಿ ಪ್ರತೀಕ್ಷಾ ಶೆಣೈ: 3 ಬೆಳ್ಳಿ ಅಮೋಘ್ ಕೆ : 1 ಬೆಳ್ಳಿ, 1 ಕಂಚು, ಕೆನಿಲ್ ಅಗಸ್ತ್ಯ: 1 ಕಂಚು, ಆವೀಶಿ ಶೆಣೈ: 1 ಚಿನ್ನ, ಅಮನ್ ರಾಜ್ : 1 ಬೆಳ್ಳಿ, 2 ಕಂಚು , ರಾಹಿ ಬಿ: 1 ಚಿನ್ನ , 1 ಬೆಳ್ಳಿ, 1 ಕಂಚು , ಅನಿಕಾ ಯು: 1 ಬೆಳ್ಳಿ, 1 ಕಂಚು, ಲಿಖಿತ್ ರಾಮಚಂದ್ರ: 1 ಚಿನ್ನ, 1 ಬೆಳ್ಳಿ, 1 ಕಂಚು, ಅಗಸ್ತ್ಯ ಎ.ಕೆ: 1 ಕಂಚು , ಧನ್ವಿತ್ : 1 ಕಂಚು, ಲಾಸ್ಯ ಕಿಶನ್: 1 ಚಿನ್ನ, 2 ಬೆಳ್ಳಿ, 1 ಕಂಚು , ನೀತಿ ರೈ: 3 ಬೆಳ್ಳಿ, ಪ್ರಾದಿ ಕ್ಲಾರ್ ಪಿಂಟೋ: 2 ಚಿನ್ನ, 1 ಬೆಳ್ಳಿ, 1 ಕಂಚು, ಅನಿಕೇತ್ ಎನ್ : 1 ಚಿನ್ನ, 2 ಕಂಚು, ನಂದನ್ ನಾಯ್ಕ್: 2 ಕಂಚು , ಅಂಕಿತ್ ಗೌಡ ಎನ್: 1 ಚಿನ್ನ, 1 ಬೆಳ್ಳಿ , ಶ್ರೀನಿಽ ಡಿ.ಕೆ : 2 ಬೆಳ್ಳಿ , ವೈಷ್ಣವ್ ಹೆಗ್ಡೆ: 2 ಚಿನ್ನ ಪಾರ್ಥ ವಾರಣಾಶಿ: 2 ಚಿನ್ನ, 1 ಬೆಳ್ಳಿ
ರಿಲೇ -ಫಲಿತಾಂಶ: 4*50 ಫ್ರೀಸ್ಟೈಲ್ ಮುಕ್ತ ವಿಭಾಗ ಪಿಎಸಿ ಎ -ಚಿನ್ನ ಈಜುಪಟುಗಳು : ಅಂಕಿತ್ ಗೌಡ ಎನ್, ಶ್ರೀನಿಽ ಡಿ.ಕೆ, ಭುವನ್ ರಾಮ್ ಜೆ, ಪಾರ್ಥ ವಾರಣಾಶಿ ಗಂಡಸರ ಮುಕ್ತ ವಿಭಾಗ – ಪಿಎಸಿ ಬಿ 4*50 ಫ್ರೀಸ್ಟೈಲ್ ತ್ರಿಶೂಲ್ ಗೌಡ ,ರಾಯ್ಸ್ಟನ್ ರೋಡ್ರಿಗಸ್ , ಸ್ವೀಕೃತ್ ಆನಂದ್, ವೈಷ್ಣವ್ ಹೆಗ್ಡೆ ಪಿಎಸಿ ಗ್ರೂಪ್ 12 ಹುಡುಗರು 4*50 – 1 ಕಂಚು ಧನ್ವಿತ್, ಅಮನ್ ರಾಜ್, ಅನ್ವಿತ್, ಮನೋಜ್ನ
ಪಿಎಸಿ ಗ್ರೂಪ್ 12 ಹುಡುಗಿಯರು 4*50 ಐಎಂ ಫ್ರಿಸೈಲ್ 2-ಚಿನ್ನ ಪ್ರಾಧಿ ಕ್ಲಾರ ಪಿಂಟೋ, ಪ್ರತೀಕ್ಷಾ ಶೆಣೈ, ಅನಿಕಾ ಯು, ಸಿಯಾ ಭವಿನ್ ಸಾವ್ಜನಿ ಪಿಎಸಿ ಗ್ರೂಪ್ 34 ಹುಡುಗರು: ಐಎಂಫ್ರೀಸ್ಟೈಲ್ 2-ಕಂಚು ಲಿಖಿತ್ ರಾಮಚಂದ್ರ, ಅರ್ಲಿನ್ ಜೋವಿಯಲ್ ಡಿಸೋಜಾ, ನಮನ್, ಚರಿತ್ ಅಮಿನ್ ಪಿಎಸಿ ಹುಡುಗರ ಗ್ರೂಪ್ 56 4*25 ಐಎಂಫ್ರೀಸ್ಟೈಲ್ : 2 ಕಂಚು ಕೆನಿಲ್ ಅಗಸ್ತ್ಯ, ಆರುಷ್, ಈಶನ್ ದೀಪಕ್, ಪ್ರತ್ಯೂಷ್ ಎಲ್.ಎಸ್ ಗೌಡ
ಜಿಲ್ಲಾ ಈಜು ಕೂಟದಲ್ಲಿ ಭಾರತದಲ್ಲಿ ಮೊದಲ ಬಾರಿಗೆ, ಜೀವರಕ್ಷಕ ಈವೆಂಟ್ ಫಿನ್ಸ್ನೊಂದಿಗೆ ಈಜು ಮತ್ತು ಅಂತರ್ರಾಷ್ಟ್ರೀಯ ಈಜು ಲೀಗ್ ಈವೆಂಟ್ ಸ್ಕಿನ್‌ಗಳನ್ನು ಸೇರಿಸಲಾಗಿತ್ತು.
ಜೀವರಕ್ಷಕ ಈವೆಂಟ್‌ನಲ್ಲಿ ಫಿನ್ಸ್ನೊಂದಿಗೆ ಈಜುವುದು ಎಂದರೆ ಈಜುಗಾರರು ಒಮ್ಮೆ ಉಸಿರು ತೆಗೊಂಡು ಆರಂಭದಲ್ಲಿ ಕಾಲಿಗೆ ರೆಕ್ಕೆಗಳನ್ನು ಧರಿಸಿ ನೀರಿನ ಅಡಿಯಲ್ಲಿ ಈಜಬೇಕು ಒಮ್ಮೆ ನೀರಿನಿಂದ ತಲೆಎತ್ತಿದರೆ ಮತ್ತೆ ಗುರಿ ತಲುಪುವವರೆಗೆ ಅದೇ ರೀತಿ ಸಾಗಬೇಕು.
ಮೊದಲ ಬಾರಿ ಸ್ಕಿನ್ಸ್ ಈಜು ಸ್ಪರ್ಧೆ : ಈಜು ಕ್ರೀಡೆಗಳನ್ನು ಜನಪ್ರಿಯಗೊಳಿಸಲು ಇಂಟರ್ನ್ಯಾಷನಲ್ ಸ್ವಿಮ್ಮಿಂಗ್ ಲೀಗ್ ಅಭಿವೃದ್ಧಿಪಡಿಸಿದ ಬ್ಯಾಕ್ ಟು ಬ್ಯಾಕ್ ರೇಸಿಂಗ್ ನ ಒಂದು ವಿಧವೇ ಸ್ಕಿನ್ಸ್ . ಈ ರೋಮಾಂಚನಕಾರಿ ಓಟವನ್ನು ಗೆಲ್ಲಲು ಈಜುಗಾರರು ವೇಗವಾಗಿರಬೇಕು ಆದರೆ ಕಡಿಮೆ ವಿಶ್ರಾಂತಿಯಲ್ಲಿ ವೇಗದ ಈಜುವಿಕೆಯನ್ನು ಪುನರಾವರ್ತಿಸಲು ಸಹಿಷ್ಣುತೆಯನ್ನು ಹೊಂದಿರಬೇಕು. ಪುತ್ತೂರು ಅಕ್ವಾಟಿಕ್ ಕ್ಲಬ್ ಈ ಜಿಲ್ಲಾ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಭಾರತದಲ್ಲಿ ಮೊಟ್ಟಮೊದಲ ಸ್ಕಿನ್ಸ್ ರೇಸ್ ಅನ್ನು ಆಯೋಜಿಸಿತ್ತು.
ಪ್ರತಿ ಓಟದ ನಂತರ 2 ದುರ್ಬಲ ಈಜುಗಾರರು ಹೊರಹಾಕಲ್ಪಡುತ್ತಾರೆ. ಈ ರೋಮಾಂಚನಕಾರಿ ಓಟವನ್ನು ಗೆಲ್ಲಲು ಈಜುಗಾರನು ಅತಿವೇಗವನ್ನು ಹೊಂದಿರುವುದು ಮಾತ್ರವಲ್ಲದೆ ಕಡಿಮೆ ವಿಶ್ರಾಂತಿಯೊಂದಿಗೆ ತ್ವರಿತ ವೇಗದ ರೇಸ್‌ಗಳನ್ನು ಪುನರಾವರ್ತಿಸಲು ಸಾಮರ್ಥ್ಯ ಹೊಂದಿರಬೇಕು.
ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಈಜುಪಟುಗಳಿಂದ ಜೀವರಕ್ಷಕ ಪ್ರಾತ್ಯಕ್ಷಿಕೆ ಈ ಸ್ಪರ್ಧೆಯ ಮತ್ತೊಂದು ವಿಶೇಷವಾಗಿತ್ತು. ಈಜುಗಾರರು ವಿವಿಧ ವಿಧಾನಗಳಿಂದ ಮುಳುಗುವ ಸಂತ್ರಸ್ತರನ್ನು ಹೇಗೆ ರಕ್ಷಿಸುವುದು ಎಂಬುದನ್ನು ಪ್ರದರ್ಶಿಸಿದರು. ಲೈಫ್ ಸೇವಿಂಗ್ ಡೆಮೊವನ್ನು ತರಬೇತುದಾರರಾದ ಪಾರ್ಥ ವಾರಣಾಶಿ ಮತ್ತು ರೋಹಿತ್ ಅವರು ನಡೆಸಿಕೊಟ್ಟರು.