ಪುತ್ತೂರು: ಮುಕ್ರಂಪಾಡಿಯಲ್ಲಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ ದ.2 ರಂದು ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವ ಸಮಾರಂಭ ಜರಗಿತು.
ಮೈಸೂರ್ ಎಸ್ಎಲ್ವಿ ಬುಕ್ ಹೌಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಮಾಲಕರಾದ ದಿವಾಕರ್ದಾಸ್ ನೇರ್ಲಾಜೆಯವರು ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿನಿಯರು ಹೆತ್ತವರು ಹಾಗು ಗುರುಗಳಿಗೆ ವಿಧೇಯರಾಗಿ, ಗೌರವದೊಂದಿಗೆ ಕಠಿಣ ಪರಿಶ್ರಮ, ನಿಷ್ಠೆಯೊಂದಿಗೆ ಹಿಡಿದ ಗುರಿಯನ್ನು ತಲುಪಲು ಸಾಧ್ಯ. ಉತ್ತಮ ಮೌಲ್ಯಗಳೊಂದಿಗೆ ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಜಿ.ರೈ ವಹಿಸಿ, ಸರಕಾರಿ ಕಾಲೇಜೊಂದು ಶಿಸ್ತು ಬದ್ಧತೆ, ಕ್ರೀಯಾಶೀಲಾ ಸಮರ್ಥ ನಾಯಕತ್ವ ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ಧಿಗೆ ದಕ್ಷ ರೀತಿಯಲ್ಲಿ ಶಿಕ್ಷಕರು ತಮ್ಮನ್ನು ತೊಡಗಿಸಿಕೊಂಡು, ಶೈಕ್ಷಣಿಕವಾಗಿ ಉತ್ತಮ ಫಲಿತಾಂಶ ಸಾಧಿಸುವುದು ಹೆಮ್ಮೆಯ ವಿಷಯವಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಎಲ್ಲರೂ ಉತ್ತೀರ್ಣರಾಗಿ 100% ಫಲಿತಾಂಶ ಬರುವಂತಾಗಲಿ ಮತ್ತು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರಮೀಳ ಜೆಸ್ಸಿ ಕ್ರಾಸ್ತಾ ವಾರ್ಷಿಕ ವರದಿ ವಾಚಿಸಿದರು. ಶೈನಿ ಮತ್ತು ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕರಾದ ಚಿತ್ರಲೇಖ ಸ್ವಾಗತಿಸಿ, ಅಶೋಕ ಪಿ ವಂದಿಸಿದರು. ಶೋಭಾ ಮತ್ತು ಭೋಜರಾಜ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸ್ಪರ್ಧೆಗಳ ವಿಜೇತರಪಟ್ಟಿಯನ್ನು ದಾಮೋದರ್, ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರನ್ನು ಲವೀನ ಲತಾ ಸಾಂತ್ ಮಯೋರ್ ಓದಿದರು. ಸಂಧ್ಯಾರವರು ದತ್ತಿ ನಿಧಿ ಬಹುಮಾನ ಮತ್ತು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಬಹುಮಾನಗಳನ್ನು, ದಿವ್ಯಾ ಅಳ್ಳ ಎಸ್.ಆರ್. ವಿಷಯವಾರು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು.
100 ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ನಗದು ಬಹುಮಾನವನ್ನು ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿನಿಯರಿಗೆ ಕಾಲೇಜಿನ ವತಿಯಿಂದ ಸ್ಮರಣಿಕ ಹಾಗೂ ನಗದು ಬಹುಮಾನ ನೀಡಲಾಯಿತು. ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನಿಯಾದ ಫಾತಿಮ ಅನಪರ್ಶಿನ ಇವರಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ವಿಷ್ಣು ಭಟ್, ಮತ್ತು ಕಾಲೇಜಿಗೆ ಪ್ರಥಮ ಸ್ಥಾನಿಯಾದ ಪೃಥಿ ಕೆ ಇವರಿಗೆ ಜೆರೋಮಿಯಸ್ ಪಾಯಸ್ ನಗದು ಬಹುಮಾನ ನೀಡಿ ಗೌರವಿಸಿದರು. ಜೆರೋಮಿಯಸ್ ಪಾಯಸ್ ಇವರು ಪ್ರತಿ ವರ್ಷ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಬಂದ ವಿದ್ಯಾರ್ಥಿನಿಗೆ ಬಹುಮಾನ ನೀಡಲು ರೂ.25000 ದತ್ತಿ ನಿಧಿ ಠೇವಣಿ ಸ್ಥಾಪಿಸಿದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಹರಿಣಾಕ್ಷ, ಜೆರೋಮಿಯಸ್ ಪಾಯಸ್, ವಿ.ಕೆ ಜೈನ್, ಚಂದ್ರಕಾಂತ್, ಅಬ್ದುಲ್ ಅಝೀಜ್, ಅಬ್ದುಲ್ ಜಬ್ಬರ್ ಹಾಗೂ ಕಾಲೇಜು ವಿದ್ಯಾರ್ಥಿ ನಾಯಕಿ ಫಾತಿಮತ್ ರಿಫಾನ ಮತ್ತು ಕಾರ್ಯದರ್ಶಿ ಶೈನಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ನಗದಿನೊಂದಿಗೆ ಸ್ಮರಣಿಕೆ ನೀಡಿ ಗೌರವ
ವಿಷಯವಾರುಗಳಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಾದ ಚಿತ್ರಲೇಖಾ (ರಾಜ್ಯಶಾಸ್ತ್ರ) ಲವೀನ ಲತಾ ಸಾಂತ್ ಮಯೋರ್ (ಲೆಕ್ಕಶಾಸ್ತ್ರ), ಜಯಲಕ್ಷ್ಮಿ.ಕೆ(ಗಣಿತಶಾಸ್ತ್ರ), ಪ್ರಸನ್ನಕುಮಾರಿ(ಜೀವಶಾಸ್ತ್ರ), ನಿರ್ಮಲ(ಭೌತಶಾಸ್ತ್ರ), ಭೋಜರಾಜ ಆಚಾರಿ(ಕನ್ನಡ), ದಾಮೋದರ್(ಇತಿಹಾಸ), ಅಶೋಕ ಪಿ (ಸಮಾಜಶಾಸ್ತ್ರ) ಇವರು ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.
