ಬೆಂಗಳೂರು: ಪತಿ-ಪತ್ನಿ ಮಧ್ಯದ ಕೌಟುಂಬಿಕ ವ್ಯಾಜ್ಯದಲ್ಲಿ ಮಗು ಸಂಪೂರ್ಣವಾಗಿ ತಾಯಿಯ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ, ಪಾಸ್ಪೋರ್ಟ್ ನೀಡುವಾಗ ತಂದೆಯ ಒಪ್ಪಿಗೆ ಬೇಕು ಎಂದು ಪಾಸ್ಪೋರ್ಟ್ ಅಧಿಕಾರಿ ಬಲವಂತ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ಪಾಸ್ಪೋರ್ಟ್ ಅಽಕಾರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.
ಪಾಸ್ಪೋರ್ಟ್ ಪಡೆದು ವಿದೇಶಕ್ಕೆ ತೆರಳಿದರೆ ಪ್ರತಿವಾದಿಯ ಭೇಟಿ ಹಕ್ಕು ಮೊಟಕಾಗುತ್ತದೆ ಎಂಬ ಪ್ರತಿವಾದಿಗಳ ಪರ ವಕೀಲರ ಆತಂಕವನ್ನು ತಳ್ಳಿ ಹಾಕಿರುವ ನ್ಯಾಯಪೀಠ, ಪಾಸ್ಪೋರ್ಟ್ ನೀಡುವುದರಿಂದ ಮಗುವಿನ ಭೇಟಿಯ ಹಕ್ಕನ್ನು ಸಂಪೂರ್ಣವಾಗಿ ನಿರಾಕರಿಸಿದಂತಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.ಪ್ರಾದೇಶಿಕ ಪಾಸ್ಪೋರ್ಟ್ ಅಽಕಾರಿಯು ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಬೇಕು. ಅರ್ಜಿದಾರರ ಮಾಜಿ ಪತಿಯ ಹಾಜರಿ ಅಥವಾ ಒಪ್ಪಿಗೆ ಕೇಳದೆ ಪಾಸ್ ಪೋರ್ಟ್ ಅರ್ಜಿಯನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.