5.60 ಲಕ್ಷ ರೂ.ನಿವ್ವಳ ಲಾಭ; ಶೇ.25 ಡಿವಿಡೆಂಟ್, ಪ್ರತಿ ಲೀ.ಹಾಲಿಗೆ 71 ಪೈಸ್ ಬೋನಸ್ ಘೋಷಣೆ
ನೆಲ್ಯಾಡಿ: ಕೊಪ್ಪ ಮಾದೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಆ.26ರಂದು ಸಂಘದ ಆವರಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಲೈಲಾತೋಮಸ್ರವರು ಮಾತನಾಡಿ, 2021-22ನೇ ಸಾಲಿನಲ್ಲಿ ಸಂಘವು 39,453 ಲೀ.ಹಾಲು ಖರೀದಿಸಿ 36,241 ಲೀ.ಹಾಲು ಒಕ್ಕೂಟಕ್ಕೆ ಮಾರಾಟ ಮಾಡಿದೆ. ಸ್ಥಳೀಯವಾಗಿ 3212 ಲೀ.ಹಾಲು ಮಾರಾಟ ಆಗಿದೆ. 2021-22ನೇ ಸಾಲಿನಲ್ಲಿ ಸಂಘವು ಒಟ್ಟು 5,14,73,270 ರೂ., ವ್ಯವಹಾರ ಮಾಡಿ 5,60,949.62 ನಿವ್ವಳ ಲಾಭಗಳಿಸಿದೆ. ಲಾಭದಲ್ಲಿ ಸಂಘದ ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 71 ಪೈಸೆ ಬೋನಸ್ ನೀಡಲಾಗುವುದು ಎಂದು ತಿಳಿಸಿದರು.
ಒಕ್ಕೂಟದ ವಿಸ್ತರಣಾಧಿಕಾರಿ ಯಮುನಾರವರು ದ.ಕ.ಹಾಲು ಒಕ್ಕೂಟದಿಂದ ಹೈನುಗಾರರಿಗೆ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದರು. ಪಶು ವೈದ್ಯಾಧಿಕಾರಿ ಡಾ.ಸಚಿನ್ರವರು ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷೆ ಪ್ರಿಯ, ನಿರ್ದೇಶಕರುಗಳಾದ ನಿಶಾಅಗಸ್ಟಿನ್, ಶೈನಿತೋಮಸ್, ಶ್ರೀಲತಾ ಸಿ.ಹೆಚ್., ಕೇಶವತಿ, ಹೇಮಾವತಿ, ಕುಸುಮಾವತಿ, ಸುಗುಣಾವತಿ, ವನಜ, ಅನಿತಾ, ವಿನೋದ, ಸೌಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಭವಾನಿ ಸ್ವಾಗತಿಸಿ, ವರದಿ ಮಂಡಿಸಿದರು. ದಯಾಮಣಿ ವಂದಿಸಿದರು.
ಬಹುಮಾನ:
ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಶ್ರೀಲತ(ಪ್ರಥಮ), ದೇಜಮ್ಮ(ದ್ವಿತೀಯ) ಹಾಗೂ ಪ್ರೇಮಲತಾ(ತೃತೀಯ)ರವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. 2021-22ನೇ ಸಾಲಿನಲ್ಲಿ ಸಂಘಕ್ಕೆ ಹಾಲು ಹಾಕಿದ ಸದಸ್ಯರಿಗೆ ಬಹುಮಾನ ನೀಡಲಾಯಿತು. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯದಿಕ ಅಂಗಳನ್ನು ಪಡೆದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.