ಪುತ್ತೂರು: ಅರಣ್ಯ ಇಲಾಖೆಯ ಪುತ್ತೂರು ಉಪವಿಭಾಗ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸಿ ಮಂಗಳೂರು ಡಿ.ಎಫ್.ಓ.ಕಛೇರಿಗೆ ವರ್ಗಾವಣೆಗೊಂಡಿದ್ದ ಪ್ರಸಾದಿನಿಯವರು ಸುಳ್ಯ ತಾಲೂಕಿನ ಪಂಜ ವಲಯಾರಣ್ಯಾಧಿಕಾರಿಯವರ ಕಛೇರಿಯ ಪ್ರಥಮ ದರ್ಜೆ ಸಹಾಯಕರಾಗಿ ವರ್ಗಾವಣೆಗೊಂಡು ಸೆ.8ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
14-02-1992ರಂದು ಅರಣ್ಯ ಇಲಾಖೆಗೆ ದ್ವಿತೀಯ ದರ್ಜೆ ಸಹಾಯಕಿಯಾಗಿ ನೇಮಕಗೊಂಡಿದ್ದ ಪ್ರಸಾದಿನಿ ಅವರು ಶಿವಮೊಗ್ಗ ಕಾರ್ಯ ಯೋಜನಾ ವಿಭಾಗ ಕಛೇರಿ ಪಿರಿಯಾಪಟ್ಟಣದಲ್ಲಿ, ವಿಭಾಗ ಕಚೇರಿ ಮಡಿಕೇರಿಯಲ್ಲಿ, ವಲಯ ಕಛೇರಿ ಮಂಗಳೂರುನಲ್ಲಿ ಮತ್ತು ಪುತ್ತೂರು ಉಪವಿಭಾಗ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 08-02-2008ರಂದು ಪ್ರಥಮ ದರ್ಜೆ ಸಹಾಯಕರಾಗಿ ಪದೋನ್ನತಿ ಹೊಂದಿ ಬಳಿಕ ಅರಣ್ಯ ಸಂಚಾರಿ ದಳ ಮಂಗಳೂರು, ಸುಬ್ರಹ್ಮಣ್ಯ ಉಪವಿಭಾಗ ಸುಳ್ಯ, ವಲಯ ಕಛೇರಿ ಪುತ್ತೂರು ಇಲ್ಲಿ ಕರ್ತವ್ಯ ನಿರ್ವಹಿಸಿ 16-07-2016ರಿಂದ ಪುತ್ತೂರು ಉಪವಿಭಾಗ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಮಂಗಳೂರಿನಲ್ಲಿರುವ ಡಿಎಫ್ಓ ಕಛೇರಿಗೆ ವರ್ಗಾವಣೆಗೊಂಡಿದ್ದರು. ಇದೀಗ ಮಂಗಳೂರಿನಿಂದ ಪಂಜಕ್ಕೆ ವರ್ಗಾವಣೆಗೊಂಡಿದ್ದಾರೆ. ಕೆ.ಎಸ್.ಹೊನ್ನಪ್ಪ ಗೌಡ ಮತ್ತು ಪುಷ್ಪಾವತಿ ಪಿ.ವಿ. ದಂಪತಿ ಪುತ್ರಿಯಾದ ಇವರು ಪತಿ ಎ.ಗಿರಿಧರ ಗೌಡ, ಪುತ್ರಿ ಕಾವ್ಯಶ್ರಿ ಎ.ಜಿ., ಪುತ್ರ ರಕ್ಷಿತ್ ಎ.ಜಿ.ರವರೊಂದಿಗೆ ಆರ್ಯಾಪು ಸಂಪ್ಯ ಅಮೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದಾರೆ. ಸ್ವಾತಂತ್ರ್ಯೋತ್ಸವ ಅಮೃತ ದಿನಾಚರಣೆ ಪ್ರಯುಕ್ತ ಸುದ್ದಿ ಬಿಡುಗಡೆ ಸಂಸ್ಥೆ ಆನ್ಲೈನ್ ಮೂಲಕ ಪುತ್ತೂರು ತಾಲೂಕಿನ 40 ಇಲಾಖೆಗಳ ಉತ್ತಮ ಅಧಿಕಾರಿ ಮತ್ತು ಸಿಬ್ಬಂದಿಗಳ ಆಯ್ಕೆಗಾಗಿ ನಡೆಸಿದ ಓಟಿನಲ್ಲಿ ಪ್ರಸಾದಿನಿರವರು ಅರಣ್ಯ ಇಲಾಖೆಯ ಉತ್ತಮ ಸಿಬ್ಬಂದಿಯಾಗಿ ಆಯ್ಕೆಯಾಗಿದ್ದರು.