ಬ್ರಹ್ಮಶ್ರೀ ನಾರಾಯಣ ಗುರು ಸಾಮಾಜಿಕ ಸುಧಾರಣೆಗಳ ಹರಿಕಾರ; ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯಕ್ರಮದಲ್ಲಿ ಎ.ಸಿ ಗಿರೀಶ್ ನಂದನ್

0
  • ದೇವ ಮಾನವರಂತೆ ಹುಟ್ಟಿ ಬಂದವರು – ಸತೀಶ್ ಕುಮಾರ್ ಕಡೆಂಜಿ
  • ನಾರಾಯಣಗುರುಗಳು ವಿಶ್ವದ ಶಕ್ತಿ – ಕೆ.ಜೀವಂಧರ್ ಜೈನ್
  • ನಾರಾಯಣಗುರುಗಳ ಸಂದೇಶ ನಿಜ ಜೀವನದಲ್ಲಿ ಅಳವಡಿಸಿ – ಡಾ| ವೀರಯ್ಯ ಹಿರೇಮಠ್

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಸಾಮಾಜಿಕ ಸುಧಾರಣೆಗಳ ಹರಿಕಾರ ಎಂದು ಸಹಾಯಕ ಕಮೀಷನರ್ ಗಿರೀಶ್ ನಂದನ್ ಹೇಳಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸೆ.9ರಂದು ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಭಾವ ಚಿತ್ರದ ಎದುರು ದೀಪ ಪ್ರಜ್ವಲಿಸಿ, ಪುಷ್ಪಾರ್ಚಣೆ ಮಾಡಿ ಮಾತನಾಡಿದರು. ಎಲ್ಲರಿಗೂ ಸಮಾನತೆಯೆಂಬ ನಾರಾಯಣ ಗುರುಗಳ ಸಂದೇಶ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದೆ ಪ್ರತಿ ನಿತ್ಯ ತಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕು. ಅದೇ ರೀತಿ ಸರಕಾರಿ ಇಲಾಖೆಯಲ್ಲೂ ಎಲ್ಲರು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಅವರು ಹೇಳಿದರು.

ದೇವ ಮಾನವರಂತೆ ಹುಟ್ಟಿ ಬಂದವರು:
ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರು ಮಾತನಾಡಿ ಸ್ವತಂತ್ರ ಪೂರ್ವದಲ್ಲಿ ಅಸ್ಪ್ರಶ್ಯತೆ ಇದ್ದಾಗ ದೇವ ಮಾನವರಂತೆ ಹುಟ್ಟಿ ಬಂದು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಈ ಕಲ್ಪನೆಯನ್ನು ಮೂಡಿಸಿ, ಎಲ್ಲರಿಗೂ ಸಮಾನತೆಯನ್ನು ಸಾರಿದ ಮತ್ತು ದೀನ ದಲಿತರಿಗೆ ದೇವಸ್ಥಾನ ನಿರ್ಮಾಣ ಮಾಡಿಸಿ ದೇವಸ್ಥಾನ ಪ್ರವೇಶ ಕಲ್ಪಿಸಿಕೊಟ್ಟಂತಹ ಮಹಾನ್ ಚೇತನ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಎಲ್ಲರಿಗೂ ಅನ್ವಯ. ತಾಲೂಕು ಆಡಳಿತದಿಂದ ಇಂತಹ ಜಯಂತಿ ಕಾರ್ಯಕ್ರಮ ಆಚರಿಸಿರುವುದು ಬಹಳ ಅರ್ಥಪೂರ್ಣ ಎಂದರು.

ನಾರಾಯಣಗುರುಗಳು ವಿಶ್ವದ ಶಕ್ತಿ:
ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ವಿಶ್ವಕ್ಕೆ ಸಂದೇಶ ಸಾರಿದ ನಾರಾಯಣ ಗುರುಗಳು ವಿಶ್ವದ ಶಕ್ತಿ ಎಂದರು.

ನಾರಾಯಣಗುರುಗಳ ಸಂದೇಶ ನಿಜ ಜೀವನದಲ್ಲಿ ಅಳವಡಿಸಿ:
ಡಿ.ವೈಎಸ್ಪಿ ಡಾ| ವೀರಯ್ಯ ಹಿರೇಮಠ್ ಅವರು ಮಾತನಾಡಿ ಧರ್ಮ ಧರ್ಮಗಳ, ಜಾತಿಗಳ ನಡುವಿನ ಕಲಹವನ್ನು ನಿಯಂತ್ರಿಸಲು ಬ್ರಹ್ಮಶ್ರಿ ನಾರಾಯಣಗುರುಗಳ ಸಂದೇಶವನ್ನು ಅರ್ಥೈಸಿಕೊಳ್ಳಬೇಕು. ಅವರ ಸಂದೇಶವನ್ನು ನಿಜ ಜೀವನಲ್ಲಿ ಅಳವಡಿಕೊಳ್ಳಬೇಕೆಂದರು.

ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ನಿಸರ್ಗಪ್ರಿಯ, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ನಾಗೇಶ್ ಬಲ್ನಾಡು, ಜತೆ ಕಾರ್ಯದರ್ಶಿ ಚಿದಾನಂದ ಸುವರ್ಣ, ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಮಾಜಿ ಅಧ್ಯಕ್ಷ ಜಯಂತ ನಡುಬೈಲು, ಕಾರ್ಯಕಾರಿ ಸಮಿತಿ ಸದಸ್ಯೆ ಯಶೋದಾ ಪಾಂಗ್ಲಾಯಿ, ಗುರುಮಂದಿರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ಮಾಜಿ ಕಾರ್ಯನಿರ್ವಹಣಾಧಿಕಾರಿ ಆರ್.ಸಿ.ನಾರಾಯಣ್, ಗುರುಮಂದಿರದ ಸದಸ್ಯೆ ಅಣ್ಣಿಪೂಜಾರಿ, ಮಾಧವ ಸಾಲ್ಯಾನ್, ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಸೊರಕೆ, ಉಲ್ಲಾಸ್ ಕೋಟ್ಯಾನ್, ಶಶಿಧರ್ ಕಿನ್ನಿಮಜಲು, ಯುವವಾಹಿನಿ ಮಾಜಿ ಅಧ್ಯಕ್ಷ ಉದಯ ಕೋಲಾಡಿ, ಜಯಂತ ಬಾಯಾರು, ಬಾಲಕೃಷ್ನ ಪಳ್ಳತ್ತಾರು, ಸದಾನಂದ ಮಟ್ಯೊಟ್ಟು, ನಾರಾಯಣ ಪೂಜಾರಿ ನೆಕ್ಕರೆ, ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಚಂದ್ರಕಲಾ ಮುಕ್ವೆ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಮೋದ್ ಕುಮಾರ್, ಗೋಪಾಲ್, ಮಹೇಶ್, ನಾಗೇಶ್ ಅತಿಥಿಗಳನ್ನು ಗೌರವಿಸಿದರು. ತಾಲೂಕು ಕಚೇರಿಯ ದಯಾನಂದ ಸ್ವಾಗತಿಸಿದರು. ಉಪತಹಸೀಲ್ದಾರ್ ಸುಲೋಚನಾ ನಾರಾಯಣ ಗುರುಗಳ ಕುರಿತು ಮಾಹಿತಿ ನೀಡಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here