ಉಪ್ಪಿನಂಗಡಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕು ಸ್ಥಾಪನೆ ಹಾಗೂ ಗ್ರಾ.ಪಂ.ನ ವ್ಯಾಯಾಮ ಶಾಲೆ (ಗರಡಿ ಮನೆ)ಯ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ಶಾಸಕ ಸಂಜೀವ ಮಠಂದೂರು ಅವರಿಂದ ಸೆ.17ರಂದು ನೆರವೇರಿತು.
ಈ ಸಂದರ್ಭ ಶಾಸಕರು `ಜಲ ಜೀವನ್ ಮಿಷನ್’ ಯೋಜನೆಯಡಿ ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಯಲಿರುವ 3.63 ಕೋ.ರೂ.ನ ಕಾಮಗಾರಿಗೆ ನಟ್ಟಿಬೈಲ್‌ನಲ್ಲಿ ಶಂಕು ಸ್ಥಾಪನೆ ನೆರವೇರಿಸಿದರು. ಗ್ರಾ.ಪಂ. ಅನುದಾನ ಹಾಗೂ ಉದ್ಯೋಗ ಖಾತ್ರಿಯೋಜನೆಯಡಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ರನ್ನಿಂಗ್ ಟ್ರ್ಯಾಕ್ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿದರು. ಶಿಕ್ಷಣ ಇಲಾಖೆ ಹಾಗೂ ಗ್ರಾ.ಪಂ. ಅನುದಾನದಿಂದ 4.70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಶೌಚಾಲಯಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಕೆಂಪಿ ಮಜಲಿನಲ್ಲಿ ಸಾರ್ವಜನಿಕ ಉದ್ದೇಶಕ್ಕೆಂದು ಗ್ರಾ.ಪಂ. ನಿರ್ಮಿಸಿದ ವ್ಯಾಯಾಮ ಶಾಲೆಗೆಯನ್ನು ಉದ್ಘಾಟಿಸಿದರು. ಬಳಿಕ ಗ್ರಾ.ಪಂ.ನ ಸಭಾ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮಾತನಾಡಿದ ಶಾಸಕರು, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾ.ಪಂ.ನ ಆಡಳಿತ ಪಣತೊಟ್ಟಿದ್ದು, ಸರಕಾರದಿಂದಲೂ ವಿವಿಧ ಯೋಜನೆಗಳನ್ನು ಗ್ರಾಮದಲ್ಲಿ ಅನುಷ್ಠಾನಿಸಲಾಗುವುದು ಎಂದರು. ಗ್ರಾ.ಪಂ. ಅಧ್ಯಕ್ಷೆ ಉಷಾಮುಳಿಯ ಹಾಗೂ ಸದಸ್ಯ ಸುರೇಶ ಅತ್ರೆಮಜಲು ಮಾತನಾಡಿ, ಗ್ರಾ.ಪಂ. ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು.
ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯ ಸರಕಾರಿ ಶಾಲಾ- ಕಾಲೇಜುಗಳಿಗೆ ಗ್ರಾ.ಪಂ. ವತಿಯಿಂದ ನೀಡಲಾಡ ಆಟೋಟ ಸಾಮಗ್ರಿಗಳನ್ನು ಹಾಗೂ ಗ್ರಾ.ಪಂ.ನ ನಿಧಿಯಡಿ ವಿಕಲಚೇತನ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಚೆಕ್ ಅನ್ನು ಇದೇ ಸಂದರ್ಭ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ವಿನಾಯಕ ಪೈ, ಗ್ರಾ.ಪಂ. ಸದಸ್ಯರಾದ ಧನಂಜಯ ನಟ್ಟಿಬೈಲು, ಯು.ಟಿ. ಮುಹಮ್ಮದ್ ತೌಸೀಫ್, ಅಬ್ದುರ್ರಹ್ಮಾನ್, ಯು.ಕೆ. ಇಬ್ರಾಹೀಂ, ಸಂಜೀವ ಮಡಿವಾಳ, ವನಿತಾ, ಉಷಾ ನಾಯ್ಕ, ಜಯಂತಿ ರಂಗಾಜೆ, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧೀರ್, ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲ ರಾಮಕೃಷ್ಣ, ಗ್ರಾಮಸ್ಥರಾದ ಕೆಂಪಿ ಮುಹಮ್ಮದ್, ಜಯಂತ ಪೊರೋಳಿ, ಉಮೇಶ್ ಶೆಣೈ, ಚಂದ್ರಶೇಖರ ಮಡಿವಾಳ, ವಿಶ್ವನಾಥ ಶೆಟ್ಟಿ ಕಂಗ್ವೆ, ರಾಮಚಂದ್ರ ಮಣಿಯಾಣಿ, ಹರೀಶ್ ನಾಯಕ್ ನಟ್ಟಿಬೈಲು, ಜಗದೀಶ್ ಶೆಟ್ಟಿ, ಹರೀಶ್ ನಾಯಕ್ ನಟ್ಟಿಬೈಲು ಹಾಗೂ ಗ್ರಾ.ಪಂ. ಕಾರ್ಯದರ್ಶಿ ದಿನೇಶ್ ಎಂ, ಸಿಬ್ಬಂದಿಗಳಾದ ಜ್ಯೋತಿ, ಆಶಾ, ಶುಭ, ಪೂಜಾಕುಮಾರಿ, ಶ್ರೀನಿವಾಸ, ರಕ್ಷಿತ್, ಮಹಾಲಿಂಗ, ಇಸಾಕ್, ಉಮೇಶ, ಇಕ್ಬಾಲ್ ಉಪಸ್ಥಿತರಿದ್ದರು.
ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿ, ವಂದಿಸಿದರು. ಸದಸ್ಯ ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.