ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪರಿಹಾರ ಸೇವೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ದೋಷ ಪರಿಹಾರಾರ್ಥ ದೈವಜ್ಞರ ಸೂಚನೆಯಂತೆ ಬೇರೆ ಬೇರೆ ಕೇತ್ರಗಳಲ್ಲಿ ವಿಶೇಷ ಸೇವೆಗಳನ್ನು ನೀಡಲಾಗುತ್ತಿದ್ದು, ಸೆ.೧೭ರಂದು ಮಹಾಲಿಂಗೇಶ್ವರ ದೇವಸ್ಥಾನದಿಂದ ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪರಿಹಾರ ಸೇವಾ ಕಾರ್ಯಕ್ರಮ ನಡೆಯಿತು.


ಮಧ್ಯಾಹ್ನ ಪೂಜಾ ಸೇವಾ ಕಾರ್ಯಕ್ರಮ ನಡೆಯಿತು. ಸೋಣ ಶನಿವಾರದ ವಿಶೇಷ ಬಲಿವಾಡು ಕೂಟವು ಇದೇ ಸಂದರ್ಭದಲ್ಲಿ ನಡೆಯಿತು. ಬಳಿಕ ನಡೆದ ಸಭೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಕುರಿಯ ಗ್ರಾಮದ ಭಕ್ತರ ಸಮಿತಿಯನ್ನು ರಚಿಸಲಾಯಿತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್ ಅವರು ಗ್ರಾಮ ಭಕ್ತ ಸಮಿತಿಯ ರೂಪುರೇಶೆಗಳನ್ನು ತಿಳಿಸಿದರು. ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು ಸ್ವಾಗತಿಸಿ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ವಂದಿಸಿದರು.


ವೇದಿಕೆಯಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜೈರಾಜ್ ಭಂಡಾರಿ ನೊಣಾಲು, ಜಯಶೀಲಾ ರೈ ಕುರಿಯ, ಶಶಿಧರ್ ಕಿನ್ನಿಮಜಲು, ಧನರಾಜ್ ಅಲೇಖಿ, ಜಯರಾಮ್ ಅಡಿಯೆ ತಿಮಾರ್, ಅರುಣಾ ಸಿ ರೈ ಕುರಿಯ ಉಪಸ್ಥಿತರಿದ್ದರು. ಅರ್ಚಕರುಗಳಾದ ವೇ ಮೂ ವೆಂಕಟ್ರಮಣ ನಕ್ಷತ್ರಿತ್ತಾಯ, ಗುರುರಾಜ್ ಮಡುಕುಳ್ಳಾ ಯ ಹಾಗೂ ವಿಷ್ಣುಮೂರ್ತಿ ಬಡಿಕಿಲ್ಲಾಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ಶೇಖರ್ ನಾರಾವಿ, ವೀಣಾ ಬಿ.ಕೆ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಅರವಿಂದ ಭಗವಾನ್, ಕುರಿಯ ಚಂದ್ರಹಾಸ ರೈ, ಗಣೇಶ್ ಕೆ ಬಳ್ಳಮಜಲು, ದೇರ್ಕಜೆ ವೆಂಟರಮಣ ಭಟ್, ಚಂದ್ರಶೇಖರ್ ರೈ ನಡುಬೈಲು, ಶ್ರೀನಿವಾಸ ನಾಕ್, ಅಜಿತ್ ರೈ, ಸಂಕೇಶ ಸದಾಶಿವ ಶೆಟ್ಟಿ ಪಟ್ಟೆ, ಪುಷ್ಪರಾಜ್ ರೈ ಕುರಿಯ, ಶಶಿಧರ್ ಕಿನ್ನಿಮಜಲು, ಅಂಗನವಾಡಿ ಕಾರ್ಯಕರ್ತೆ ಕಮಲ ಒಟೆತ್ತಿಮಾರು, ಮಹೇಶ್ ಮಾಪಲ, ಅಂಕಿತ್, ಸಂಪತ್ ಮತ್ತಿತರರು ಉಪಸ್ಥಿತರಿದ್ದರು. ದೇವಳದ ವತಿಯಿಂದ ಗಿಡ ವಿತರಣೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here