ವಿಟ್ಲ: ರಾಜ್ಯದಲ್ಲಿನ ಪ್ರಮುಖ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜ್ಯ ಪೋಲೀಸ್ ನಿರ್ದೇಶನದಂತೆ ಬಂಟ್ವಾಳ ಹಾಗೂ ವಿಟ್ಲ ಪೋಲೀಸರ ತಂಡ ಬೊಳಂತೂರು ನಿವಾಸಿ ಮಹಮ್ಮದ್ ಕುಟ್ಟಿ ಎಂಬವರ ಪುತ್ರ ಪಿಎಫ್ ಐ ಮುಖಂಡ ಮಹಮ್ಮದ್ ತಬ್ಸೀರ್ ಎಂಬವರ ಮನೆಗೆ ಮುಂಜಾನೆ ಮೂರು ಗಂಟೆ ವೇಳೆ ದಾಳಿ ನಡೆಸಿದೆ.
ರಾಜ್ಯದ ಪ್ರಕರಣವೊಂದಕ್ಕೆ ಹಲವು ವಿಚಾರಗಳನ್ನು ಕುರಿತು ಈ ದಾಳಿ ನಡೆದಿದ್ದು, ತಬ್ಸೀರ್ ಅವರಿಗೆ ಸೇರಿದ ಎರಡು ಮನೆಗಳಿಗೆ ಅಂದರೆ ಒಂದು ಹಳೆಯ ಮನೆ ಹಾಗೂ ಹೊಸ ಮನೆಗಳಿಗೆ ದಾಳಿ ನಡೆಸಿ ಎಲ್ಲಾ ಮಾಹಿತಿ ಕಲೆ ಹಾಕಲಾಗುತ್ತಿದೆ.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ, ವಿಟ್ಲ ಇನ್ಸ್ ಪೆಕ್ಟರ್ ನಾಗರಾಜ್ ಎಚ್, ಇ., ನಗರ ಠಾಣಾ ಪೋಲೀಸ್ ಎಸ್. ಐ.ಗಳಾದ ಕಲೈಮಾರ, ಅವಿನಾಶ್, ಗ್ರಾಮಾಂತರ ಎಸ್ ಐ ಹರೀಶ್, ವಿಟ್ಲ ಎಸ್.ಐ.ಸಂದೀಪ್ ಸಹಿತ ಇಡೀ ಪೋಲೀಸ್ ತಂಡ ಇಲ್ಲಿ ಮೊಕ್ಕಾಂ ಇದ್ದು ಭದ್ರತೆ ಒದಗಿಸಿ ತನಿಖೆ ನಡೆಸುತ್ತಿದೆ. ಹೆಚ್ಚಿನ ಮಾಹಿತಿ ಪೋಲಿಸ್ ತನಿಖೆಯ ಬಳಿಕ ತಿಳಿದುಬರಬೇಕಿದೆ.