ಕಡಬ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಗ್ರಾಹಕರಾಗಿದ್ದು ಅನಾರೋಗ್ಯದಿಂದ ಮೃತಪಟ್ಟ ಆಲಂಕಾರು ನಿವಾಸಿ ವಾರಿಜರವರ ಕುಟುಂಬಕ್ಕೆ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದಿಂದ 5 ಸಾವಿರ ರೂ., ಆರ್ಥಿಕ ನೆರವು ನೀಡಲಾಯಿತು.
ಮೃತ ವಾರಿಜರವರ ತಾಯಿ ಶ್ರೀಮತಿ ಕಾಳಿಯವರಿಗೆ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗರವರು ಆರ್ಥಿಕ ನೆರವು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಜಯಕರ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.