ಬಡಗನ್ನೂರುಃ ಬಡಗನ್ನೂರು ಗ್ರಾ. ಪಂ.ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ೨೦೨೨ ೨೩ನೇ ಸಾಲಿನ ಪ್ರಥಮ ಹಂತದ ಮತ್ತು ೨೦೨೧-೨೨ನೇ ಸಾಲಿನ ಕೇಂದ್ರ ೧೪ನೇ ಮತ್ತು ೧೫ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯು ಸೆ.೨೧ರಂದು ಬಡಗನ್ನೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ತಾ.ಸಂಯೋಜಕ ಚಂದ್ರಶೇಖರ ಎಣ್ಮೂರು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಬಗ್ಗೆ ಸಮಗ್ರ ಮಾಹಿತಿ ನೀಡಿ ಮಾತನಾಡಿ ಪಾರದರ್ಶಕತೆ ಮತ್ತು ಉತ್ತರದಾಯಕತ್ವ ನಿಟ್ಟಿನಲ್ಲಿ ೧೪ನೇ ಮತ್ತು ೧೫ ಹಣಕಾಸು ಯೋಜನೆಯಡಿ ಹಂಚಿಕೊಳ್ಳಲಾದ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್ವಹಿಸಿದ ಕಾಮಗಾರಿ ಬಗ್ಗೆ ಬಾಹ್ಯ ಹಾಗೂ ಅಂತರಿಕ ಲೆಕ್ಕ ಪರಿಶೋಧನೆ ಮಾಡಲಾಗಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಖರ್ಚು ಅಗಿದೆ. ಎಂದ ಅವರು ಯಾವುದೇ ಕಾಮಗಾರಿ ನಡೆದ ಸಂದರ್ಭದಲ್ಲಿ ಕಾಮಗಾರಿ ಸಮಗ್ರ ಮಾಹಿತಿ ನಾಮಫಲಕ ಅಳವಡಿಸುವುದು ಕಡ್ಡಾಯವಾಗಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕ ಕಾಮಗಾರಿ ಪರಿಶೀಲನೆ ಮಾಡುವ ಜವಾಬ್ದಾರಿ ಇದೆ ಅಗ ಮಾತ್ರ ಯಾವುದೇ ಕಾಮಗಾರಿ ಗುಣಮಟ್ಟ ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಭಾಧ್ಯಕ್ಷತೆ ವಹಿಸಿದ್ದ ಮತ್ತೂರು ಪಶುಸಂಗೋಪನಾ ಇಲಾಖಾ ವೈದ್ಯಾಧಿಕಾರಿ ಪ್ರಸನ್ನ ಹೆಬ್ಬಾರ್ ಮಾತನಾಡಿ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ರೀತಿಯಲ್ಲಿ ಚರ್ಚೆಗಳು ನಡೆದಿವೆ ಗ್ರಾಮೀಣ ಆರ್ಥಿಕ ವ್ಯವಸ್ಥೆ ಉತ್ತಮ ಪಡೆದುಕೊಂಡು ಗ್ರಾಮದ ಅಭಿವೃದ್ಧಿ ಹೊಂದಲಿ ಎಂದು ಅವರು ಸೆ.೧೫ ರಿಂದ ೨೮ರೊಳಗೆ ತಾಲೂಕಿನ ಎಲ್ಲಾ ಭಾಗದಲ್ಲಿ ಸಾಮೂಹಿಕ ಉಚಿತ ರೇಬೀಸ್ ಲಸಿಕೆ ಅಭಿಯಾನ ನಡೆಯಲಿದೆ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ೨೪ ರಂದು ಬೆಳಗ್ಗೆ ೧೦ಕ್ಕೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಸಾರ್ವಜನಿಕ ತಮ್ಮ ಸಾಕುನಾಯಿಗಳನ್ನು ತಂದು ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಿದರು.
ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕೆ, ಉಪಾಧ್ಯಕ್ಷ ಸಂತೋಷ್ ಅಳ್ವ ಗಿರಿಮನೆ, ಈಶ್ವರಮಂಗಲ ಪಶುಸಂಗೋಪನಾ ವೈದ್ಯಾಧಿಕಾರಿ ಬಸವರಾಜು ಉಪಸ್ಥಿತರಿದ್ದರು. ಸದಸ್ಯರಾದ ರವಿರಾಜ ರೈ ಸಜಂಕಾಡಿ, ವೆಂಕಟೇಶ್ ಕನ್ನಡ್ಕ, ಕುಮಾರ ಅಂಬಟೆಮೂಲೆ, ಪದ್ಮನಾಭ ಸುಳ್ಯಪದವು, ಲಿಂಗಪ್ಪ ಗೌಡ ಮೋಡಿಕೆ, ರವಿಚಂದ್ರ ಸಾರೆಪ್ಪಾಡಿ, ಹೇಮಾವತಿ ಮೋಡಿಕೆ, ಪುಷ್ಪಾವತಿ ದೇವಕಜೆ, ಸುಜಾತ ಎಂ, ದಮಯಂತಿ ನೆಕ್ಕರೆ, ಸುಶೀಲ ಪಕ್ಯೊಡ್, ಜ್ಯೋತಿ ಅಂಬಟೆಮೂಲೆ, ಹಾಗೂ ಉದ್ಯೋಗ ಖಾತರಿ ಫಲಾನುಭವಿಗಳು, ಅಂತರಿಕ ಲೆಕ್ಕ ಪರಿಶೋಧಕ ತಂಡದ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದರು.
ಗ್ರಾ.ಪಂ ಗುಮಾಸ್ತ ಜಯಾಪ್ರಸಾದ ರೈ ಕುತ್ಯಾಳ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.