ಕಾಣಿಯೂರು: ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ದೋಳ್ಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು. ಸಂಘವು 2021-22ನೇ ಸಾಲಿನಲ್ಲಿ ರೂ 3,07,646.43 ನಿವ್ವಳ ಲಾಭಗಳಿಸಿದ್ದು, ಶೇ 25 ಡಿವಿಡೆಂಡ್ ಹಾಗೂ ಪ್ರತಿ ಲೀಟರ್‌ಗೆ 81ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಆನಂದ ಬನೇರಿ ಘೋಷಿಸಿದರು.
ದ.ಕ.ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಮಾತನಾಡಿ, ಉತ್ತಮ ಗುಣಮಟ್ಟ ಹಾಗೂ ಪರಿಶುದ್ಧ ಹಾಲನ್ನು ಸಂಘಕ್ಕೆ ಪೂರೈಕೆ ಮಾಡಬೇಕು. ಶುದ್ಧ ಮತ್ತು ಸ್ವಚ್ಚತ್ತೆಯ ಕಡೆಗೆ ಗಮನಕೊಟ್ಟು ಹಾಲನ್ನು ಡೈರಿಗೆ ಪೂರೈಕೆ ಮಾಡಬೇಕು. ಜೊತೆಗೆ ಸರದಿ ಸಾಲಿನ ಹಾಲನ್ನು ಸರದಿ ಸಾಲಿನಲ್ಲಿಯೇ ಸಂಘಕ್ಕೆ ಪೂರೈಕೆ ಮಾಡಬೇಕು ಎಂದರು. ಪಶುವೈದ್ಯಾಧಿಕಾರಿ ಡಾ| ಸಚಿನ್ ಕುಮಾರ್ ಮಾಹಿತಿ ನೀಡಿದರು. ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಬಗ್ಗೆ ಧರ್ಮೇಂದ್ರ ಗೌಡ ಕಟ್ಟತ್ತಾರು ಮಾಹಿತಿ ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ದೋಳ್ಪಡಿ ಹಾ.ಉ.ಸ.ಸಂಘದ ಉಪಾಧ್ಯಕ್ಷ ಪುರಂದರ ಕೂರೇಲು, ನಿರ್ದೇಶಕರಾದ ಗೋಪಾಲಕೃಷ್ಣ ಭಟ್ ಪಿಜಕ್ಕಳ, ಪುಟ್ಟಣ್ಣ ಗೌಡ ಅಕ್ಕಾಜೆ, ಸೀತಾರಾಮ ಗೌಡ ಮರಕ್ಕಡ, ಸತೀಶ ಗೌಡ ಕೆಳಗಿನಮನೆ, ಮೋಹಿನಿ ಪರವ ದೋಳ್ಪಾಡಿ, ಚಿದಾನಂದ ದೋಳ್ಪಾಡಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಜಯಪ್ರಕಾಶ್ ೨೦೨೧-೨೨ನೇ ಸಾಲಿನ ವರದಿ ವಾಚಿಸಿದರು.
ಬಹುಮಾನ ವಿತರಣೆ- ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿದ ಶಿವರಾಮ ಡಿ.ಎಚ್ ಪ್ರಥಮ ಬಹುಮಾನ ಪಡೆದುಕೊಂಡರೆ, ಸಂಘದ ಉಪಾಧ್ಯಕ್ಷ ಧರ್ಮಪಾಲ ಗೌಡ ಕೆ.ಟಿ ದ್ವಿತೀಯ ಬಹುಮಾನ ಪಡೆದುಕೊಂಡರು. ದಯಾನಚಿದ ಗೌಡ ತೃತೀಯ ಬಹುಮಾನ ಪಡೆದುಕೊಂಡರು. ಎಸ್‌ಎಸ್‌ಎಲ್‌ಸಿಯಲ್ಲಿ ಅರ್ತೀ ಹೆಚ್ಚು ಅಂಕಗಳಿಸಿದ ಮಾನ್ಯ ಕೂರೇಲು ಮತ್ತು ಕೌಶಿಕ್ ಕೂರೇಲು ಅವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಶುದ್ಧ, ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿ- ಆನಂದ ಬನೇರಿ: ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ ಬನೇರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದ.ಕ ಜಿಲ್ಲಾ ಹಾಲು ಒಕ್ಕೂಟದಿಂದ ಸಿಗುವಂತಹ ಹಲವಾರು ಯೋಜನೆಗಳನ್ನು ಸಂಘದ ಸದಸ್ಯರಿಗೆ ತಲುಪಿಸುವ ಉತ್ತಮ ಸೇವೆ ಸಂಘ ಮಾಡುತ್ತಿದೆ. ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಕೆ ಮಾಡಿದಾಗ ಸಂಘ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಿದೆ. ಆ ಮೂಲಕ ಸಂಘದ ಅಭಿವೃದ್ಧಿಯಲ್ಲಿ ಎಲ್ಲಾ ಸದಸ್ಯರೂ ಕೈಜೋಡಿಸಬೇಕೆಂದರು. ಒಟ್ಟಿನಲ್ಲಿ ಶುದ್ಧ ಮತ್ತು ಸ್ವಚ್ಚತ್ತೆಯ ಕಡೆಗೆ ಗಮನಕೊಟ್ಟು ಹಾಲನ್ನು ಪೂರೈಕೆ ಮಾಡಬೇಕು. ಎಂದರು.