- 56.25 ಕೋಟಿ ರೂ. ವ್ಯವಹಾರ, ರೂ. 11 ಕೋಟಿ ಸಾಲ ವಿತರಣೆ, ಶೇ 73.47. ಸಾಲ ವಸೂಲಾತಿ- ಭಾಸ್ಕರ ಎಸ್.ಗೌಡ ಇಚ್ಲಂಪಾಡಿ
ಪುತ್ತೂರು: ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ(ಪಿಎಲ್‌ಡಿ) ಬ್ಯಾಂಕ್ 2021-22ನೇ ಸಾಲಿನಲ್ಲಿ 56.25 ಕೋಟಿ ರೂ.ಗಳ ವ್ಯವಹಾರವನ್ನು ನಡೆಸಿ, ರೂ. 11 ಕೋಟಿ ಸಾಲವನ್ನು ವಿತರಣೆ ಮಾಡಲಾಗಿದ್ದು, ಶೇ 73.47. ಸಾಲ ವಸೂಲಾತಿಯಾಗಿದ್ದು, 2022-23 ನೇ ಸಾಲಿನಲ್ಲಿ ಬ್ಯಾಂಕ್ 15 ಕೋಟಿ ರೂ, ಸಾಲ ವಿತರಣೆಯ ಗುರಿಯನ್ನು ಹೊಂದಿದ್ದು ಬ್ಯಾಂಕ್ ಸಹಕಾರ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿರವರು ಹೇಳಿದರು.
ಸೆ. 24 ರಂದು ಪುತ್ತೂರು ಪುರಭವನದಲ್ಲಿ ಜರಗಿದ ಬ್ಯಾಂಕ್‌ನ 84ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಲ ವಸೂಲಾತಿಯಲ್ಲಿ ದ.ಕ.ಜಿಲ್ಲೆಯ ಪ್ರಾಥಮಿಕ ಬ್ಯಾಂಕ್‌ಗಳ ಪೈಕಿ ಅತೀ ಹೆಚ್ಚು ಸಾಲ ವಿತರಣೆ ಮಾಡುವ ಬ್ಯಾಂಕ್ ಎಂದು ಗುರುತಿಸಿಕೊಂಡಿರುವುದು ನಮ್ಮ ಸಂಸ್ಥೆಗೆ ಗೌರವವನ್ನು ತಂದಿದೆ ಎಂದು ಹೇಳಿದರು.
ಹೊಸ ಸಾಲವನ್ನು ನೀಡಲಾಗುವುದು-
ಸುಸ್ತಿದಾರರ ಬಳಿಗೆ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ತೆರಳಿ, ಅವರ ಮನ ಒಲಿಸಿ, ಸಾಲವನ್ನು ಮರುಪಾವತಿಸುವಂತೆ ಮಾಡಿ, ಬಳಿಕ ಅವರಿಗೆ ಹೊಸ ಸಾಲವನ್ನು ನೀಡಲಾಗುವುದು ಎಂದು ಅಧ್ಯಕ್ಷ ಭಾಸ್ಕರ್ ಎಸ್. ಗೌಡರವರು ತಿಳಿಸಿದರು.
ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಬೋರ್ಕರ್, ಸದಸ್ಯರುಗಳಾದ ಯಶೋಧರ್ ಜೈನ್, ಯತೀಂದ್ರ ಕೊಚ್ಚಿ, ಉಮೇಶ್ ಶೆಟ್ಟಿ ಸಾಯಿರಾಮ್, ವಿಜಯಹರಿ ರೈ ಬಳ್ಳಮಜಲುರವರುಗಳು ವಿವಿಧ ಸಲಹೆ ಸೂಚನೆಯನ್ನು ನೀಡಿದರು.
ಅಭಿನಂದನೆ:
ಸದ್ರಿ ಬ್ಯಾಂಕಿನ ಸದಸ್ಯರ ಮಕ್ಕಳು 2021-22ನೇ ಸಾಲಿನ ವರ್ಷದಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ( ಇಂಗ್ಲೀಷ್ ಮಾಧ್ಯಮ) ಪ್ರಥಮ- ಪ್ರತಿಕ್ಷಾ ಕಿಣಿ, ದ್ವೀತಿಯ ಸೌಭಾಗ್ಯ ಚಾರ್ವಕ, (ಕನ್ನಡ ಮಾಧ್ಯಮ) ಪ್ರಥಮ- ಮೋಕ್ಷಿತಾ ಎನ್ ಇಚ್ಲಂಪಾಡಿರವರುಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಸನ್ಮಾನ
ಬ್ಯಾಂಕಿನ ಮಾಜಿ ಅಧ್ಯಕ್ಷ ಬಾಲಕೃಷ್ಣ ಬೋರ್ಕರ್‌ರವರಿಗೆ ನೂತನ ಕಟ್ಟಡದ ಉದ್ಘಾಟನಾ ಸಂದರ್ಭದಲ್ಲಿ ನಡೆಯಬೇಕಿದ್ದ ಸನ್ಮಾನವನ್ನು ಈ ಸಂದರ್ಭದಲ್ಲಿ ಬ್ಯಾಂಕಿನ ವತಿಯಿಂದ ನೆರವೇರಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ರಾಜಶೇಖರ್ ಜೈನ್ ಎನ್, ಎ.ಬಿ.ಮನೋಹರ ರೈ, ನಾರಾಯಣ ಕನ್ಯಾನ, ಯುವರಾಜ ಪೆರಿಯತ್ತೋಡಿ, ಪ್ರವೀಣ್ ರೈ ಪಂಜೋಟ್ಟು, ದೇವಯ್ಯ ಗೌಡ, ಉಮೇಶ್ ನಾಕ್, ಧರ್ಣಪ್ಪ ಮೂಲ್ಯ, ಮೀನಾಕ್ಷಿ , ಸೋಮಪ್ಪ ನಾಯ್ಕ ಎಸ್., ಶೀನ ನಾಯ್ಕ ಉಪಸ್ಥಿತರಿದ್ದರು.
ಬ್ಯಾಂಕಿನ ವ್ಯವಸ್ಥಾಪಕ ಶೇಖರ ಎಂ. ವರದಿ ವಾಚಿಸಿದರು. ಕಡಬ ಶಾಖೆಯ ವ್ಯವಸ್ಥಾಪಕಿ ಸುಮನ ಎಂ. ಕ್ಷೇತ್ರಾಧಿಕಾರಿ ರೊನಾಲ್ಡ್ ಮಾರ್ಟಿಸ್, ಸಿಬ್ಬಂದಿಗಳಾದ ಆರತಿ ಟಿ.ಕೆ, ಸುರೇಶ್ ಪಿ, ಎನ್.ವೇಣು ಭಟ್, ಭರತ್ ಟಿ, ಹರೀಶ್ ಗೌಡ, ವಿಜಯ ಭಟ್ ಎಚ್, ವಿನಯಕುಮಾರ್ ಗೌಡ ಬಿ.ಎಸ್, ಶಿವಪ್ರಸಾದ್ ಯು., ಮನೋಜ್ ಕುಮಾರ್ ಸಹಕರಿಸಿದರು. ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್ ಗೌಡ ಇಚ್ಲಂಪಾಡಿ ಸ್ವಾಗತಿಸಿ. ಲೆಕ್ಕಾಧಿಕಾರಿ ವಿನಯಕುಮಾರ್ ಕಾರ್‍ಯಕ್ರಮ ನಿರೂಪಿಸಿದರು. ಮನೋಜ್ ಎ, ಪ್ರಾರ್ಥನೆಗೈದರು. ಬ್ಯಾಂಕಿನ ಕೋಶಾಧಿಕಾರಿ ನಾರಾಯಣ ಪೂಜಾರಿ ಕೆ. ವಂದಿಸಿದರು.
ಬ್ಯಾಂಕ್‌ಗೆ ಸೋಲಾರ್ ವಿದ್ಯುತ್ ಬಳಕೆಯಿಂದ ವಾರ್ಷಿಕ 2 ಲಕ್ಷ ರೂ, ಉಳಿತಾಯ
ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ ಹೊಸ ಕಟ್ಟಡದಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಾಗಿದ್ದು, ಬ್ಯಾಂಕಿನ ಹವಾನಿಯಂತ್ರಿತ ವ್ಯವಸ್ಥೆ(ಎಸಿ) ಸೇರಿ ಎಲ್ಲಾ ಉಪಯೋಗಕ್ಕೆ ಸೋಲಾರ್ ವಿದ್ಯುತ್ ಬಳಕೆ ಆಗುವುದರಿಂದ, ವಾರ್ಷಿಕ 2 ಲಕ್ಷ ರೂಪಾಯಿಗಿಂತಲೂ ಹೆಚ್ಚು ಉಳಿತಾಯ ಬ್ಯಾಂಕ್‌ಗೆ ಆಗಲಿದೆ. ಆಮೂಲಕ ಸೋಲಾರ್ ವಿದ್ಯುತ್ ಬಳಕೆಯನ್ನು ಇಲ್ಲಿ ಅರ್ಥಪೂರ್ಣವಾಗಿ ಮಾಡಲಾಗಿದೆ.
ಬ್ಯಾಂಕ್‌ನಲ್ಲಿ ಲಿಫ್ಟ್ ವ್ಯವಸ್ಥೆ-ಬ್ಯಾಂಕ್ ಹೊಸ ಕಟ್ಟಡದಲ್ಲಿ ಹಿರಿಯ ಗ್ರಾಹಕರ ಅನುಕೂಲಕ್ಕಾಗಿ ಲಿಫ್ಟ್ ವ್ಯವಸ್ಥೆಯ ಅನುಕೂಲ ಇದೆ – ಭಾಸ್ಕರ್ ಎಸ್.ಗೌಡ ಇಚ್ಲಂಪಾಡಿ
ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್ ಪುತ್ತೂರು