ಬೆಳ್ಳಿಪ್ಪಾಡಿಯಲ್ಲಿ ಸಂತ ಮದರ್ ತೆರೇಸಾ ವಾರ್ಷಿಕ ಹಬ್ಬ

0

ಉಪ್ಪಿನಂಗಡಿ: ದೀನರ ಕನ್ಯಾ ಮಾತೆ ಚರ್ಚ್ ಉಪ್ಪಿನಂಗಡಿ ಇದರ ಅಧೀನದಲ್ಲಿರುವ ಬೆಳ್ಳಿಪ್ಪಾಡಿ ವಾರ್ಡು ವತಿಯಿಂದ ಸಂತ ಮದರ್ ತೆರೇಸಾ ಅವರಿಗೆ ಸಮರ್ಪಿಸಲ್ಪಟ್ಟ ವಾರ್ಷಿಕ ಹಬ್ಬ ಸಿಲ್ವೆಸ್ಟರ್ ವೇಗಸ್ ಮನೆಯಲ್ಲಿ ಜರಗಿತು.

ಉಪ್ಪಿನಂಗಡಿ ಚರ್ಚ್ ಧರ್ಮಗುರು ಅಬೆಲ್ ಲೋಬೋ ಮತ್ತು ಚರ್ಚ್ ಪಾಲನಾ ಸಮಿತಿ ಕಾರ‍್ಯದರ್ಶಿ ವಿನ್ಸೆಂಟ್ ಮೊರಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ‍್ಯಕ್ರಮಕ್ಕೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಕಳೆದ 5 ವರ್ಷಗಳಿಂದ ವಾರ್ಡು ಗುರಿಕಾರರಾಗಿ ಸೇವೆ ಸಲ್ಲಿಸಿದಮೇರಿ ಡೈನಾ ವೇಗಸ್‌ರವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ವಾರ್ಡು ಗುರಿಕಾರ ಮಾರ್ಸೆಲ್ ವೇಗಸ್ ಸ್ವಾಗತಿಸಿ, ಪ್ರೀಮಲ್ ಡಿಕ್ರೂಸ್ ವಂದಿಸಿದರು. ಮೆಲಿಟ ಪ್ರಿನ್ಸಿಯಾ ಮತ್ತು ಆಶಿಟ ವೇಗಸ್ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here