ಪುತ್ತೂರು: ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ಶ್ರೀ ದೇವರ ಬೆಳ್ಳಿಯ ಉಬ್ಬು ಛಾಯಾ ಬಿಂಬದ ಪ್ರತಿಷ್ಠಾ ಕಾರ್ಯಕ್ರಮಗಳು ಡಿ.8ರಂದು ನೆರವೇರಿತು.

ವೇ.ಮೂ ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ 6.30ಕ್ಕೆ ಸ್ಥಳ ಶುದ್ದಿ, ಸಾನಿಧ್ಯ ಕಲಶ ಪೂಜೆ ನಡೆದು 8.44ಕ್ಕೆ ಶ್ರೀ ಶಕ್ತಿ ಜಟಾಧಾರಿ ದೇವರ ಬೆಳ್ಳಿಯ ಉಬ್ಬು ಛಾಯಾ ಬಿಂಬ ಪ್ರತಿಷ್ಠೆ ನಡೆಯಿತು.
ಮಧ್ಯಾಹ್ನ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಶಿವಪಂಚಾಕ್ಷರಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ನಡೆದ ಬಳಿಕ ಸಭಾ ಕಾರ್ಯಕ್ರಮ, ಸಂಜೆ ಏಕಾಹ ಭಜನೆ, ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.