ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬ ಭಜನಾ ಮಂಡಳಿಯ ನೂತನ ಭೋಜನ ಶಾಲೆಯಲ್ಲಿ ಧಾರ್ಮಿಕ ವಿಧಿವಿಧಾನ – 40ನೇ ವರ್ಷದ ನವರಾತ್ರಿ ಉತ್ಸವ ಆರಂಭ

0

ವಿಟ್ಲ: ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಭ ಭಜನಾ ಮಂಡಳಿಯಲ್ಲಿ ಅ.3ರಂದು ಲೋಕಾರ್ಪಣೆ ಗೊಳ್ಳಲಿರುವ ಭೋಜನ ಶಾಲೆಯಲ್ಲಿ ಗಣಪತಿ ಹವನ ಸಹಿತ ಧಾರ್ಮಿಕ ವಿಧಿವಿಧಾನಗಳು ನಡೆಯಿತು.

ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಸೋಮಶೇಖರ್ ಶೆಟ್ಟಿ ಅಳಕೆ ಮಜಲು, ಗೌರವ ಸಲಹೆಗಾರರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು. ಅಧ್ಯಕ್ಷರಾದ ಜಗದೀಶ್ ಪೂಜಾರಿ, ಕಾರ್ಯದರ್ಶಿ ತಿರುಮಲೇಶ್ವರ ನಾಯ್ಕ್ ಅಳಕೆಮಜಲು, ಉಪಾಧ್ಯಕ್ಷರಾದ ಬಾಸ್ಕರ ರೈ ಅಳಕೆಮಜಲು, ಖಜಾಂಜಿ ಸುಧೀರ್ ಕುಮಾರ್ ಕೆಮನಾಜೆ, ಜೊತೆಕಾರ್ತದರ್ಶಿ ದಿನೇಶ್ ಪೆಲತ್ತಿಂಜ,ಶ್ರೀ ಶಾರದಾಂಬ ಮಹಿಳಾ ಸಮಿತಿಯ ಅಧ್ಯಕ್ಷರಾದ ಸುಗಂಧಿನಿ, ಕಾರ್ಯದರ್ಶಿ ವನಿತಾ ಜೇಡರಕೋಡಿ, ಉಪಾಧ್ಯಕ್ಷರಾದ ಶ್ವೇತಾ ಕೆಮನಾಜೆ, ಖಜಾಂಜಿ ಮೋಹಿನಿ ಪೆಲತ್ತಿಂಜ, ಜೊತೆ ಕಾರ್ಯದರ್ಶಿ ಚಂದ್ರಾವತಿ ಪುಂಡಿಕಾಯಿ ಗ್ರಾಮಸ್ಥರಾದ ಕೃಷ್ಣಪ್ಪ ಕೆಮನಾಜೆ, ಲೊಕೇಶ್ ಅಳಕೆಮಜಲು, ಹೇಮಲತಾ ಜಿನ್ನಪ್ಪ ಗೌಡ ಪೆಲತಿಂಜ, ರಾಘವ ಉರಿಮಜಲು, ಜಯಂತಿ ಬಾಲಕೃಷ್ಣ ಶೆಟ್ಟಿ, ಸತೀಶ್ ನಾಯಕ್ ಪುಂಡಿಕಾಯಿ, ಪುರುಷೋತ್ತಮ ಜೇಡರಕೋಡಿ, ಕೃಷ್ಣಪ್ಪ ಕುಲಾಲ್ ಪುಂಡಿಕಾಯಿ ಮೊದಲಾದವರು ಉಪಸ್ಥಿತರಿದ್ದರು.

ಭಜನಾ ಮಂಡಳಿಯಲ್ಲಿ ನಡೆಯುತ್ತಿರುವ 40ನೇ ವರ್ಷದ ನವರಾತ್ರಿ ಉತ್ಸವ ಹಾಗೂ ಶಾರದೋತ್ಸವವು ಸೆ.೨೬ರಂದು ಆರಂಭಗೊಂಡಿದ್ದು, ಅ.೪ರ ವರೆಗೆ ನಡೆಯಲಿದೆ. ಅ.3ರ ವರೆಗೆ ಪ್ರತೀ‌ದಿನ ರಾತ್ರಿ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ. ಸೆ.೩೦ರಂದು ರಾತ್ರಿ ಭಜನೆಯ ಬಳಿಕ ಭಕ್ತಿಗೀತೆ, ಭಾವಗೀತೆ ಹಾಗೂ ಜಾನಪದ ಗೀತೆ ಸ್ಪರ್ದೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಅ.೨ರಂದು ಬೆಳಗ್ಗೆ ಧ್ವಜಾರೋಹಣ, ಬಳಿಕ ವೇ.ಮೂ ಶ್ರೀಧರ ಭಟ್ ಕಬಕರವರ ಪೌರೋಹಿತ್ಯದಲ್ಲಿ ಮೂರ್ತಿ ಪ್ರತಿಷ್ಠೆ ನಡೆಯಲಿದೆ. ಬಳಿಕ ತೆನೆ ವಿತರಣೆ, ಅಕ್ಷರಾಭ್ಯಾಸ, ಭಜನೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆಯ‌ ಬಳಿಕ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ ಭಜನೆ, ರಾತ್ರಿ ರಂಗಪೂಜೆ, ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಇವರಿಂದ ಸಾಂಸ್ಕೃತಿಕ. ಸೌರಭ ನಡೆಯಲಿದೆ.

ಅ.3ರಂದು ಪೂಜಾ ಸೇವೆ ಆರಂಭ, ಭಜನೆ, ಮಧ್ಯಾಹ್ನ ಮಾಹಾಪೂಜೆಯ ಬಳಿಕ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಲಿದೆ.

ಸಾಯಂಕಾಲ ಭಜನೆ , ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲ್ಜಿಗದ ಕಾಳಿ ಪಂತ್ರದೇವತೆ ತುಳು ನಾಟಕ ನಡೆಯಲಿದೆ. ಸೆ.೪ರಂದು ಬೆಳಗ್ಗೆ ಪೂಜಾ ಸೇವೆ ಆರಂಭಗೊಳ್ಳಲಿದೆ. ಬಳಿಕ ಭಜನೆ ನಡೆಯಲಿದೆ. ಬಳಿಕ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ ಮಹಾಮಂಗಳಾರತಿ ನಡೆದು ದಿಗ್ವಿಜಯೋತ್ಸವ ನಡೆಯಲಿದೆ ಎಂದು ಭಜನಾ ಮಂಡಳಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here