ಹಳೆನೇರೆಂಕಿ ಹಾ.ಉ.ಮಹಿಳಾ ನವಸಾಕ್ಷರರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

7.26 ಲಕ್ಷ ರೂ.ನಿವ್ವಳ ಲಾಭ; ಶೇ.25 ಡಿವಿಡೆಂಡ್, ಪ್ರತಿ ಲೀ.ಗೆ 98 ಪೈಸೆ ಬೋನಸ್ ಘೋಷಣೆ

ರಾಮಕುಂಜ: ಹಳೆನೇರೆಂಕಿ ಹಾಲು ಉತ್ಪಾದಕರ ಮಹಿಳಾ ನವಸಾಕ್ಷರರ ಸಹಕಾರಿ ಸಂಘದ 2021-22ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.24ರಂದು ಸಂಘದ ವಠಾರದಲ್ಲಿ ನಡೆಯಿತು.

ಸಂಘದ ಉಪಾಧ್ಯಕ್ಷೆ ಪುಷ್ಪಾವತಿ ಕೆ. ಸಭೆಯ ಅಧ್ಯಕ್ಷತೆ ವಹಿಸಿದ್ದರು. 2021-22ನೇ ಸಾಲಿನಲ್ಲಿ 1,04,63,383 ರೂ.ಮೊತ್ತದ ಹಾಲು ಖರೀದಿ ಮಾಡಲಾಗಿದೆ. ಇದರಲ್ಲಿ 30,842 ರೂ.ಮೊತ್ತದ ಹಾಲು ಸ್ಥಳೀಯವಾಗಿ ಮಾರಾಟ ಆಗಿದ್ದು 1,18,16,702 ರೂ.ಮೊತ್ತದ ಹಾಲು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ಲವಣ ಮಿಶ್ರಣ, ಪಶು ಆಹಾರ ಖರೀದಿಸಿ ಸದಸ್ಯರಿಗೆ ಮಾರಾಟ ಮಾಡಲಾಗಿದೆ. ಸಂಘವು 7,26,058.51 ರೂ.ನಿವ್ವಳ ಲಾಭಗಳಿಸಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 98 ಪೈಸೆ ಬೋನಸ್ ನೀಡಲಾಗುವುದು ಎಂದು ಉಪಾಧ್ಯಕ್ಷೆ ಪುಷ್ಪಾವತಿ ಕೆ., ಹೇಳಿದರು. ಮುಖ್ಯ ಅತಿಥಿಯಾಗಿದ್ದ ದ.ಕ.ಸಹಕಾರಿ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್, ಪಶುವೈದ್ಯಾಧಿಕಾರಿ ಡಾ.ಜಿತೇಂದ್ರ ಪ್ರಸಾದ್, ವಿಸ್ತರಣಾಧಿಕಾರಿ ಯಮುನಾರವರು ಮಾಹಿತಿ ನೀಡಿದರು.

ಬಹುಮಾನ ವಿತರಣೆ:

ಅತೀ ಹೆಚ್ಚು ಹಾಲು ಹಾಕಿದ ಫಿಲೋಮಿನಾ ಮ್ಯಾಥ್ಯು (ಪ್ರಥಮ), ಜಯಲಕ್ಷ್ಮೀ ಹೆಚ್. (ದ್ವಿತೀಯ) ಬಹುಮಾನ ಪಡೆದುಕೊಂಡರು. ಗುಣಮಟ್ಟದ ಹಾಲು ಹಾಕಿದ ರೇವತಿ ಪಾಲೆತ್ತಡ್ಡರವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. 300 ದಿನಕ್ಕಿಂತ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ಶ್ರದ್ಧಾಂಜಲಿ:
ಇತ್ತೀಚೆಗೆ ನಿಧನರಾದ ಸಂಘದ ಮಾಜಿ ಅಧ್ಯಕ್ಷೆ ಫಿಲೋಮಿನಾ ಮ್ಯಾಥ್ಯುರವರಿಗೆ ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಯವರು ಫಿಲೋಮಿನಾ ಮ್ಯಾಥ್ಯುರವರ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು. 1 ನಿಮಿಷ ಮೌನ ಪ್ರಾರ್ಥನೆ ಮೂಲಕ ಮೃತರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ನಿರ್ದೇಶಕರಾದ ಜಯಶೀಲಾ, ಚಂದ್ರಾವತಿ, ಸುಮಿತ್ರ, ಸವಿತಾ ಕೆ.ಹೆಚ್., ದೇವಕಿ ಎಸ್.ಎಚ್., ಇಂದಿರಾ, ಭುವನೇಶ್ವರಿ, ವಸಂತಿ ಜಿ.ಕೆ., ಜಯಲಲಕ್ಷ್ಮೀ ಹೆಚ್., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶೀಲಾ ಎಸ್.ಎನ್. ಸ್ವಾಗತಿಸಿ, ವರದಿ ಮಂಡಿಸಿದರು. ಜಯಲಕ್ಷ್ಮೀ ಹೆಚ್.ವಂದಿಸಿದರು. ಜಯಶೀಲ, ಸುಮಿತ್ರ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here