ಪುತ್ತೂರು: ಸಾಮೆತ್ತಡ್ಕ ನಿವಾಸಿ, ತಾಮ್ರದ ಕೆಲಸಗಾರಿಕೆ ವೃತ್ತಿಯನ್ನು ನಿರ್ವಹಿಸುತ್ತಾ ಬಂದಿರುವ ಜೆರೋಮ್ ಮಸ್ಕರೇನ್ಹಸ್(84ವ.)ರವರು ಅಸೌಖ್ಯದಿಂದ ಸೆ.29 ರಂದು ನಿಧನ ಹೊಂದಿದ್ದಾರೆ.
ಮೃತ ಜೆರೋಮ್ ಮಸ್ಕರೇನ್ಹಸ್ ರವರು ತಮ್ಮ 16ರ ಹರೆಯಲ್ಲಿಯೇ ತಾಮ್ರದ ಕಸುಬುಗಾರಿಯಲ್ಲಿ ತೊಡಗಿಸಿಕೊಂಡಿದ್ದರು. ಪುತ್ತೂರಿನ ಚಂದು ಶೆಟ್ಟಿ ಸಂಸ್ಥೆಯಲ್ಲಿ ಸುಮಾರು 40 ವರ್ಷಗಳ ಕಾಲ ತಾಮ್ರದ ಕಸುಬುಗಾರಿಕೆಯನ್ನು ಅವರು ನಿರ್ವಹಿಸಿ, ಬಳಿಕ ತಮ್ಮ ಸಾಮೆತ್ತಡ್ಕ ಮನೆಯಲ್ಲಿಯೇ ಎಂದಿನ ಕಸುಬುಗಾರಿಕೆಯನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ.
ಮೃತರು ಪತ್ನಿ ರೊಜಿನಾ ಕ್ರಾಸ್ತಾ, ಪುತ್ರರಾದ ಸುನಿಲ್ ಮಸ್ಕರೇನ್ಹಸ್ ಸಾಮೆತ್ತಡ್ಕ, ಮೆಲ್ವಿನ್ ಮಸ್ಕರೇನ್ಹಸ್ ಸಾಮೆತ್ತಡ್ಕ, ವಿಕ್ಟರ್ ಆಲ್ವಿನ್ ಮಸ್ಕರೇನ್ಹಸ್ ಸೌದಿ ಅರೇಬಿಯಾ, ಪುತ್ರಿ ಲಿಲ್ಲಿ ಮಸ್ಕರೇನ್ಹಸ್ ಕುಲ್ಸೇಕರ್ ಮಂಗಳೂರು, ಅಳಿಯ ಮೆಲ್ವಿನ್ ಡಿ’ಸಿಲ್ವ ಮಂಗಳೂರು, ಸೊಸೆಯಂದಿರಾದ ಅನಿತಾ ಡಿ’ಸೋಜ ಸಾಮೆತ್ತಡ್ಕ, ಜೋಯ್ಸ್ ಜೇನ್ ಬರ್ಬೋಜಾ ಬಂಟ್ವಾಳರವರನ್ನು ಅಗಲಿದ್ದಾರೆ.