‘ಮನೆ-ಮನೆ ಬೆಳಗುವಲ್ಲಿ ಭಜನೆಯ ಪಾತ್ರ ಅಪಾರ’ – ರಾಮಕೃಷ್ಣ ಕಾಟುಕುಕ್ಕೆ
ಪುತ್ತೂರು: ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಸೆ.28ರಂದು ಶ್ರೀ ಶಾರದಾಪೂಜೆ ಹಾಗೂ ವಾಹನಪೂಜೆ ನಡೆಯಿತು. ಭಜನಾ ಸಂಘಟಕ, ದಾಸ ಸಾಹಿತ್ಯದಲ್ಲಿ ಪ್ರಖ್ಯಾತರಾದ ಶ್ರೀರಾಮಕೃಷ್ಣ ಕಾಟುಕುಕ್ಕೆರವರು ಭಜನೆಯ ನೇತೃತ್ವ ವಹಿಸಿ ಸುಮಾರು ಎರಡು ಗಂಟೆಗಳ ಕಾಲ ಮಕ್ಕಳೊಂದಿಗೆ ಭಜನಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ಅರ್ಚಕರಾದ ರಾಧಾಕೃಷ್ಣ ಕಕ್ಕೂರು ವೈದಿಕ ಕಾರ್ಯಕ್ರಮವನ್ನು ನೆರವೇರಿಸಿದರು. ಕಾರ್ಯಕ್ರದಲ್ಲಿ ಆಡಳಿತಮಂಡಳಿಯ ಅಧ್ಯಕ್ಷರಾದ ರಂಗನಾಥ ರೈ ಗುತ್ತು, ಕೋಶಾಧಿಕಾರಿಗಳಾದ ಕರುಣಾಕಾರ ಶೆಟ್ಟಿ ಕೊಮ್ಮಂಡ, ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾದ ವಿನೋದ್ ಕುಮಾರ್ ರೈ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ ಹಾಗೂ ಶಿಕ್ಷಕವೃಂದ, ವಿದ್ಯಾರ್ಥಿವೃಂದ ಭಜನಾ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದರು. ಪ್ರಸಾದ ವಿತರಣೆ, ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.