
ಪುತ್ತೂರು: 2022 ಜನವರಿ ತಿಂಗಳಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ಜರಗಿಸಿದ ಗಣಕಯಂತ್ರ ಪರೀಕ್ಷೆಯಲ್ಲಿ ದರ್ಬೆಯ ಲಕ್ಷ್ಮೀ ಟೈಪ್‌ರೈಟಿಂಗ್ ಮತ್ತು ಕಂಪ್ಯೂಟರ‍್ಸ್ ಸಂಸ್ಥೆಗೆ ಶೇ. 100 ಫಲಿತಾಂಶ ಲಭಿಸಿದೆ. ಸಂಸ್ಥೆಯಿಂದ ಆಫೀಸ್ ಅಟೋಮೇಶನ್ ಪರೀಕ್ಷೆಗೆ ಹಾಜರಾದ 42 ವಿದ್ಯಾರ್ಥಿಗಳಲ್ಲಿ ಅಶ್ವಿತಾ ಎಸ್., ಕೃತಿ ಎ.ಕೆ., ಶ್ರದ್ಧಾ ಎಸ್., ರಕ್ಷಿತಾ, ರಜನೀಶ್ ಎಮ್., ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ. 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಗ್ರಾಫಿಕ್ ಡಿಸೈನ್ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.