ಪುತ್ತೂರು: ಇತ್ತೀಚೆಗೆ ಉದ್ಘಾಟನೆಗೊಂಡ ಪ್ರೇರಣಾ ಸಂಸ್ಥೆಯ ವತಿಯಿಂದ ಮೂರು ದಿನಗಳ ತರಬೇತಿ ಶಿಬಿರ ಅರ್ಪಣಾ – 2022 ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾ ಭವನದಲ್ಲಿ ಉದ್ಘಾಟನೆಗೊಂಡಿತು.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡರು ಶಿಬಿರ ಉದ್ಘಾಟಿಸಿ ಮಾತನಾಡಿ ಇಂದು ಕೌಶಲ್ಯ ವೃದ್ಧಿ ತುರ್ತಾಗಿ ಆಗಬೇಕಾದ ಸಂಗತಿ ಆಗಿದೆ. ಈ ನಿಟ್ಟಿನಲ್ಲಿ ಪ್ರೇರಣಾ ತಂಡದ ಕಾರ್ಯ ಮಹತ್ವ ಬೀರಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನೋಟರಿ ನ್ಯಾಯವಾದಿ ಚಿದಾನಂದ ಬೈಲಾಡಿ ಪ್ರೆರಣಾದ ಕಾರ್ಯ ಸಕಾಲಿಕವಾಗಿದೆ ಎಂದರು. ಮತ್ತೋರ್ವ ಅತಿಥಿ ಪುತ್ತೂರು ಜೇಸಿಐ ಅಧ್ಯಕ್ಷ ಶಶಿರಾಜ್ ರೈ ಶುಭ ಹಾರೈಸಿದರು. ಕಾರ್ಯಕ್ರಮದ ಸಂಯೋಜಕ ಸೀತಾರಾಮ ಕೇವಳ ಮಾತನಾಡಿ ಮೂರು ದಿನಗಳಲ್ಲಿ ಭಾಷಣ ಕಲೆ, ಆ್ಯಂಕರಿಂಗ್, ಮಾನವೀಯ ಸಂಬಂಧ ಹಾಗೂ ಕಾರ್ಯಕ್ರಮ ಸಂಘಟನೆ ಕುರಿತಾದ ತರಬೇತಿಗಳು ನಡೆಯುವ ಕುರಿತು ಮಾಹಿತಿ ನೀಡಿ ಎಲ್ಲಾ ಅವಧಿಗಳನ್ನೂ ರಾಷ್ಟ್ರೀಯ ತರಬೇತುದಾರರೇ ನಡೆಸಿಕೊಡುತ್ತಾರೆ ಎಂದರು. ಪ್ರೇರಣಾ ಸಂಸ್ಥೆಯ ಪ್ರವೀಣ್ ಕುಂಟ್ಯಾನ ಸ್ವಾಗತಿಸಿ ಅತಿಥಿಗಳನ್ನು ಗೌರವಿಸಿದರು. ಸಂತೋಷ್ ಕುಮಾರ್ ರೈ ಮತ್ತು ಮುರಳೀಧರ ಕೆ. ಎಲ್. ಸಹಕರಿಸಿದರು. ಪ್ರೆರಣಾದ ನಾಗೇಶ್ ಕೆಡೆಂಜಿ ವಂದಿಸಿದರು. ಸಾಕ್ಷಿ, ಶಮಾ ಮತ್ತು ನಿಭಾ ಬಿ. ರೈ ಪ್ರಾರ್ಥಿಸಿದರು. ವಸಂತ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು.