ಪುತ್ತೂರು: ನಾಡಿನ ಪ್ರಖ್ಯಾತ ಸಂಗೀತ ಸಂಸ್ಥೆ ಗಾನಸಿರಿ ಕಲಾ ಕೇಂದ್ರದ ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಕೊಕ್ಕಡ, ಕುದ್ಮಾರು, ಊಂತನಾಜೆ, ಮುರ ಮೊಗ್ರು ಮತ್ತು ಸುಳ್ಯ ಶಾಖೆಗಳಲ್ಲಿ ಗಾಯನ ತರಬೇತಿ ಪಡೆಯಲು ವಿಜಯ ದಶಮಿಯ ವಿಶೇಷ ದಿವಸ ಅಕ್ಟೋಬರ್ 5 ರಂದು ಬೊಳುವಾರಿನ ಆಕ್ಸಿಸ್ ಬ್ಯಾಂಕ್ ಕಟ್ಟಡದಲ್ಲಿರುವ ಗಾನಸಿರಿಯ ಪುತ್ತೂರು ಶಾಖೆಯಲ್ಲಿ ವಿಶೇಷವಾದ ವಿದ್ಯಾರಂಭ , ಗುರುವಂದನೆ, ಭಜನಾ ಸೇವೆ ಹಮ್ಮಿಕೊಳ್ಳಲಾಗಿದೆ.
ಎಲ್ಲಾ ಶಾಖೆಗಳಲ್ಲಿ ಸುಗಮ ಸಂಗೀತ ಮಾತ್ರವಲ್ಲದೆ ಡ್ರಾಯಿಂಗ್ ತರಗತಿಗಳೂ ನಡೆಯುತ್ತಿದೆ. ಈಗಾಗಲೇ 20 ವರ್ಷಗಳಲ್ಲಿ ದಾಖಲೆಯ 23 ಸಾವಿರ ವಿದ್ಯಾರ್ಥಿಗಳಿಗೆ ಗಾಯನ ತರಬೇತಿ ನೀಡಿರುವ ನಾಡಿನ ಅತಿ ಅಪರೂಪದ ಸಂಗೀತ ಸಂಸ್ಥೆಯಾಗಿರುವ ಗುರುಗಳಾದ ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಸುಪ್ರಸಿದ್ಧ ಸಂಗೀತ ಸಂಸ್ಥೆಯಲ್ಲಿ ವಿಜಯ ದಶಮಿಯ ಪವಿತ್ರವಾದ ದಿನ ದಾಖಲಾತಿ ಮಾಡಿಕೊಳ್ಳುವ ಆಸಕ್ತಿ ಇರುವವರು 9901555893 ಸಂಖ್ಯೆಯನ್ನು ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.