ಪುತ್ತೂರು: ಅಕ್ಷಯ ಸಮೂಹ ಸಂಸ್ಥೆ, ಆಂತರಿಕ ಗುಣಮಟ್ಟ ಭರವಸೆ ಕೋಶ, ಲಿಯೋ ಕ್ಲಬ್ ನಿಯೋಸ್ ಅಕ್ಷಯನ್ಸ್ ಮತ್ತು ಅದ್ವಯ ಕನ್ನಡ ಸಂಘ ಜಂಟಿ ಆಶ್ರಯದಲ್ಲಿ 70 ನೇ ಕನ್ನಡ ರಾಜ್ಯೋತ್ಸವ ನ.1ರಂದು ಅಕ್ಷಯ ಕಾಲೇಜು ಸಂಭಾಂಗಣದಲ್ಲಿ ಆಚರಿಸಲಾಯಿತು.
ಗಣ್ಯರು ದೀಪ ಪ್ರಜ್ವಲನ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ಜಿಲ್ಲಾಧ್ಯಕ್ಷರಾದ ವಿಂಧ್ಯಾ ಎಸ್ ರೈ ಕಡೇಶಿವಾಲಯ ಕನ್ನಡ ರಾಜ್ಯೋತ್ಸವ ಮಹತ್ವ ಕುರಿತಾಗಿ ಮತ್ತು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಉಪಾಧ್ಯಕ್ಷ ಲಯನ್ ರವಿ ಪ್ರಸಾದ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಈ ವೇಳೆ ಅದ್ವಯ ಕನ್ನಡ ಸಂಘದ ಪದಾಧಿಕಾರಿಗಳ ಅರ್ಥಪೂರ್ಣ ಪದಸ್ವೀಕಾರ ಮಾಡಲಾಯಿತು. ಪದವಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ಅಕ್ಷಯ ಕಾಲೇಜಿನಲ್ಲಿ ಕನ್ನಡದ ನಡೆಯ ಬೆಳವಣಿಗೆಯ ಕುರಿತಾಗಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಂಗಾರತ್ನ ಮತ್ತು ಆಂತರಿಕ ಭರವಸೆ ಮತ್ತು ಗುಣಮಟ್ಟ ಕೋಶದ ನಿರ್ದೇಶಕಿ ರಶ್ಮಿ, ಕನ್ನಡ ಉಪನ್ಯಾಸಕಿ ರಶ್ಮಿತಾ ಮತ್ತು ಅದ್ವಯ ಸಾಹಿತ್ಯ ಸಂಘದ ಅಧ್ಯಕ್ಷ ಸಂತೋಷ್ ಮತ್ತು ಲಯನ್ ಗಣೇಶ್ ಶೆಟ್ಟಿ, ಲಯನ್ ದಯಾನಂದ ರೈ ಕೊರ್ಮಂಡ ಉಪಸ್ಥಿರಿದ್ದರು.
ವಿದ್ಯಾರ್ಥಿಗಳು ಕನ್ನಡದ ತೇರು ಮತ್ತು ಹಚ್ಚೇವು ಕನ್ನಡದ ದೀಪ ಪದ್ಯವನ್ನು ಗಾಯನ ಮಾಡಿದರು. ಕನ್ನಡ ಉಪನ್ಯಾಸಕಿ ರಶ್ಮಿತಾ ಸ್ವಾಗತಿಸಿ, ಬಿ. ಹೆಚ್.ಎಸ್ ಉಪನ್ಯಾಸಕಿ ಶೃತ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ನೇಹಾ ದ್ವಿತೀಯ ಬಿ. ಕಾಂ ವಂದಿಸಿ, ಹರಿಪ್ರಸಾದ್ ದ್ವಿತೀಯ ಬಿಎ ನಿರೂಪಿಸಿದರು.
