ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ರೇಡಿಯೋ ಪಾಂಚಜನ್ಯದ ಸಹಯೋಗದಲ್ಲಿ ಮುಳಿಯ ಜ್ಯುವೆಲ್ಸ್ ನಿರ್ವಹಣೆ ಹಾಗೂ ಪ್ರಾಯೋಜಕತ್ವದಲ್ಲಿ ನವರಾತ್ರಿ ಪ್ರಯುಕ್ತ ಆನ್‌ಲೈನ್‌ನಲ್ಲಿ ನಡೆಯುವ ದೇವಿಸ್ತುತಿ ಗಾಯನ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಅ. 2ರಂದು ಮುಳಿಯ ಜೇಸಿ ಹಾಲ್‌ನಲ್ಲಿ ನೆರವೇರಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಳಿಯ ಜ್ಯುವೆಲ್ಸ್ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಧಾರ್ಮಿಕ ಸನಾತನ ಸಂಸ್ಕೃತಿಯ ಆಚಾರ ವಿಚಾರಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮುಂದಿನ ಪೀಳಿಗೆಗಳಿಗೂ ಧರ್ಮ-ಸಂಸ್ಕೃತಿಯ ಅರಿವು ಜಾಗೃತವಾಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಬೇಕಾಗಿದೆ ಎಂದು ಹೇಳಿ, ಶುಭಹಾರೈಸಿದರು. ವೇದಿಕೆಯಲ್ಲಿ ಮುಳಿಯ ಜ್ಯುವೆಲ್ಸ್‌ನ ಎಚ್‌ಆರ್ ಶ್ಯಾಮ್‌ಮೂರ್ತಿ, ಆನ್‌ಲೈನ್ ಸೇಲ್ಸ್ ವಿಭಾಗದ ಲತಾ ಯತೀಶ್ ಉಪಸ್ಥಿತರಿದ್ದರು. ರೇಡಿಯೋ ಪಾಂಚಜನ್ಯದ ಕಾರ್ಯದರ್ಶಿ ಪದ್ಮಾ ಕೆ.ಆರ್. ಆಚಾರ್ಯ ಸ್ವಾಗತಿಸಿದರು. ಆನ್‌ಲೈನ್ ದೇವಿಸ್ತುತಿ ಗಾಯನ ಸ್ರ್ಪೆಯಲ್ಲಿ 122 ಸ್ಪರ್ಧಾಳುಗಳು ನೋಂದಣಿ ಮಾಡಿ ಭಾಗವಹಿಸಿದ್ದರು. ತೀರ್ಪುಗಾರರಾಗಿ ವಿದುಷಿ ಪ್ರೀತಿಕಲಾ ಮತ್ತು ತನ್ವಿ ಡಿ.ಐ ಸಹಕರಿಸಿದರು. ರೇಡಿಯೋ ಪಾಂಚಜನ್ಯದ ಸಂಯೋಜಕಿ ತೇಜಸ್ವಿ ರಾಜೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.