ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್ ಹಾಗೂ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಮತ್ತು ಮ್ಯಾನೇಜ್ಮೆಂಟ್ ಇದರ ಸಂಯುಕ್ತ ಆಶ್ರಯದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಮಹಾಲಿಂಗೇಶ್ವರ ಸಭಾಭವನದ ಮೇಲಂತಸ್ತಿನಲ್ಲಿ ನವೆಂಬರ್ 1 ರಂದು ನಡೆಸಲಾಯಿತು.

ಪುತ್ತೂರು ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಈಶ್ವರ್ಭಟ್ ಪಂಜಿಗುಡ್ಡೆ ದೀಪ ಪ್ರಜ್ವಲನೆಯ ಮೂಲಕ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ, ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಸಂಸ್ಥೆಯ ಸಂಚಾಲಕ ಗೋಕುಲ್ ನಾಥ್ ಪಿ.ವಿ. ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಮುಖ್ಯ ಅತಿಥಿ ಪುತ್ತೂರು ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಸದಸ್ಯ ವಿಜಯ ಸುವರ್ಣ ,ಪ್ರಾಂಶುಪಾಲರಾದ ಹೇಮಲತಾ ಗೋಕುಲ್ ನಾಥ್, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಬ್ದುಲ್ ನಾಸೀರ್ ಇವರು ನಿರೂಪಿಸಿದರು.
ಒಟ್ಟು 5 ತಂಡಗಳು ಭಾಗವಹಿದ್ದು ಶ್ರೀ ಪ್ರಗತಿವಿಸ್ತಾರದ ವಿದ್ಯಾರ್ಥಿಗಳ ತಂಡವಾದ ಎಮರಲ್ಡ್ ಪ್ರಥಮ ಬಹುಮಾನ ಪಡೆದುಕೊಂಡರೆ, ಪ್ರಗತಿ ಸ್ಟಡಿ ಸೆಂಟರ್ನ ಗಜ ತಂಡ ದ್ವೀತಿಯ ಸ್ಥಾನವನ್ನು ಪಡೆದುಕೊಂಡಿತು. ಉತ್ತಮ ದಾಳಿಗಾರ ಮಹಮ್ಮದ್ ರಿಯಾಮ್ ಹಾಗೂ ಉತ್ತಮ ಹಿಡಿತಗಾರ ಆಗಿ ಕೌಶಿಕ್ ಪ್ರಶಸ್ತಿ ಪಡೆದುಕೊಂಡರು.
ಪಂದ್ಯಾಟದ ತೀರ್ಪುಗಾರರಾಗಿ ಪಾಣಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್ ರೈ, ಮಂಜಲ್ಪಡ್ಪು ಬಿ.ಇ.ಎಂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಾಧವಗೌಡ ,ಉಪ್ಪಿನಂಗಡಿ ಆರಫಾ ವಿದ್ಯಾಕೇಂದ್ರ ದೈಹಿಕ ಶಿಕ್ಷಣ ಶಿಕ್ಷಕ ಆಸೀಫ್ ಭಾಗವಹಿಸಿದರು.