ಪುತ್ತೂರು: ಎಸ್.ವೈ.ಎಸ್ ಪುತ್ತೂರು ಸೆಂಟರ್ ಹಾಗೂ ಎಸ್ಸೆಸ್ಸೆ- ಪುತ್ತೂರು ಡಿವಿಶನ್ ಆಶ್ರಯದಲ್ಲಿ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥಾ ಅ.5ರಂದು ಪುತ್ತೂರಿನಲ್ಲಿ ನಡೆಯಿತು.
ಜಾಥಾಗೆ ದರ್ಬೆಯಲ್ಲಿ ಚಾಲನೆ ನೀಡಲಾಯಿತು. ಸಯ್ಯದ್ ಸಾದಾತ್ ತಂಙಳ್‌ರವರು ದುವಾ ನೆರವೇರಿಸಿದರು. ಜಿ.ಎಂ ಉಸ್ತಾದ್‌ರವರು ಉದ್ಯಮಿ ಯೂಸುಫ್ ಹಾಜಿ ಕೈಕಾರ ಅವರಿಗೆ ಧ್ವಜ ಹಸ್ತಾಂತರಿಸಿದರು. ಸಾದಾತ್ ತಂಙಳ್ ಅವರು ಜಿ.ಎಂ ಮಹಮ್ಮದ್ ಕುಂಞಿ ಜೋಗಿಬೆಟ್ಟುರವರಿಗೆ, ಜಲೀಲ್ ಸಖಾಫಿ ಜಾಲ್ಸೂರುರವರು ಉದ್ಯಮಿ ಆದಂ ಹಾಜಿ ಪಡೀಲ್‌ರವರಿಗೆ ಹಾಗೂ ಜಿ.ಕೆ ಇಬ್ರಾಹಿಂ ಅಮ್ಜದಿ ಮಂಡೆಕೋಲುರವರು ಹಾಫಿಳ್ ಸುಫ್ಯಾನ್ ಸಖಾಫಿಯವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಗೆ ಚಾಲನೆ ನೀಡಲಾಯಿತು.
ಜಾಥಾದ ಬಳಿಕ ಕಿಲ್ಲೆ ಮೈದಾನದಲ್ಲಿ ಮಿಲಾದ್ ಸಾರ್ವಜನಿಕ ಕಾರ್ಯಕ್ರಮ ನಡೆಯಿತು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕೋಶಾಧಿಕಾರಿ ಹಾಫಿಲ್ ಸುಫ್ಯಾನ್ ಸಖಾಫಿ ಮೂಡಬಿದ್ರೆ ಹುಬ್ಬುರ್ರಸೂಲ್ ಪ್ರಭಾಷಣ ನಡೆಸಿದರು. ಜಾಥಾದಲ್ಲಿ ನೂರಾರು ಮಂದಿ ಭಾಗಿಯಾದರು. ಎಸ್ಸೆಸ್ಸೆಫ್ ಹಾಗೂ ಎಸ್‌ವೈಎಸ್ ನಾಯಕರು ಮತ್ತು ಕಾರ್ಯಕರ್ತರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.
ಗಮನ ಸೆಳೆದ ದಫ್ ಪ್ರದರ್ಶನ
ದರ್ಬೆಯಿಂದ ಪುತ್ತೂರು ಮುಖ್ಯ ರಸ್ತೆಯಾಗಿ ಸಾಗಿದ ಕಾಲ್ನಡಿಗೆ ಜಾಥಾವು ಕಿಲ್ಲೆ ಮೈದಾನದಲ್ಲಿ ಸಮಾಪ್ತಿಯಾಯಿತು. ಜಾಥಾದುದ್ದಕ್ಕೂ ಸ್ಕೌಟ್, ಗೈಡ್ಸ್ ಹಾಗೂ ದಫ್ ತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಜಾಥಾದಲ್ಲಿ ಪ್ರವಾದಿ ಮಹಮ್ಮದ್(ಸ.ಅ) ರವರ ಸ್ವಲಾತ್ ಹಾಗೂ ಮದ್‌ಹ್ ಗಾನಗಳೊಂದಿಗೆ ನೂರಾರು ಮಂದಿ ಹೆಜ್ಜೆ ಹಾಕಿದರು. ಎಸ್ಸೆಸ್ಸೆಫ್, ಎಸ್‌ವೈಎಸ್ ಸಹಿತ ಇತರ ಸುನ್ನೀ ಸಂಘ ಸಂಸ್ಥೆಗಳು, ಕಾರ್ಯಕರ್ತರು ಭಾಗವಹಿಸಿದ್ದರು.