ಉಪ್ಪಿನಂಗಡಿ: ಆರ್ಥಿಕವಾಗಿ ತೊಂದರೆಗೊಳಗಾಗಿದ್ದ ತಣ್ಣೀರುಪಂಥ ಗ್ರಾಮದ ಮುಂದಿಲ ನಿವಾಸಿ ಧನಂಜಯ ಪೂಜಾರಿಯವರಿಗೆ ಬೆಳ್ತಂಗಡಿ ಕೋಟಿ- ಚೆನ್ನಯ ಸೇವಾ ಯೋಜನೆಯಿಂದ ಆರ್ಥಿಕ ಸಹಾಯ ನೀಡಲಾಯಿತು.
ಧನಂಜಯ ಪೂಜಾರಿಯವರ ಪತ್ನಿ ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದು, ಅವರ ಮನೆಯ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಸಮಾಜಮುಖಿ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಕಳೆದ ಕೆಲ ತಿಂಗಳ ಹಿಂದೆ ರೂಪುಗೊಂಡ ಕೋಟಿ ಚೆನ್ನಯ ಸೇವಾ ಯೋಜನಾ ತಂಡವು ಈಗಾಗಲೇ ಬೆಳ್ತಂಗಡಿ ತಾಲೂಕಿನ ಹಲವು ಅಶಕ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದು, ಧನಂಜಯ ಪೂಜಾರಿಯವರ ಮನೆಯ ಪರಿಸ್ಥಿತಿಯನ್ನು ತಿಳಿದ ತಂಡವು ಪ್ರಮುಖರಾದ ಸುಂದರ ಪೂಜಾರಿ, ಭಗೀರಥ ಜಿ., ಚರಣ್ ಕುಮಾರ್, ಚಿದಾನಂದ ಇಡ್ಯ ಹಾಗೂ ಸ್ಥಳೀಯರಾದ ಜಯವಿಕ್ರಮ್ ಕಲ್ಲಾಪು, ಜಯಾನಂದ ಕಲ್ಲಾಪು, ಗುಣಕರ್ ಅಗ್ನಾಡಿ, ಕೇಶವತಿ ನಾರಾಯಣ ಪೂಜಾರಿ, ರಾಘವ ಪೂಜಾರಿ, ಜಯಂತಿ ಪಾಲೇದು, ಯೋಗೀಶ್ ಮಜಿಕುಡೆಲ್ ಅವರಿಂದ ಸಹಾಯಧನ ಸಂಗ್ರಹಿಸಿ ಅವರ ಕುಟುಂಬಕ್ಕೆ ನೀಡಿತು. ತಣ್ಣೀರುಪಂಥ ಬಿಲ್ಲವ ಸಂಘದ ಅಧ್ಯಕ್ಷ ಮಹೇಶ್ ಧನಸಹಾಯ ಹಸ್ತಾಂತರಿಸಿದರು. ಯೋಗೀಶ್, ಚೇತನ್, ಸ್ವಾಯತ್, ವಿಶ್ವನಾಥ್, ಗೋಪಾಲ ಮಚ್ಚಿನ, ರಜನಿನಾಥ್ ಮುಂದಿಲ, ನಾರಾಯಣ ಮಚ್ಚಿನ ಚಂದ್ರಶೇಖರ್ ಮಚ್ಚಿನ ಮತ್ತಿತರರು ಉಪಸ್ಥಿತರಿದ್ದರು.