ಪುತ್ತೂರು;ವಿಶ್ವದಾದ್ಯಂತ ಕ್ರೈಸ್ತ ಬಾಂಧವರು ಅ.23 ರಂದು ಆಚರಿಸಲ್ಪಡುವ ‘ಮಿಶನ್ ಸಂಡೇ’ ಪ್ರಯುಕ್ತ ಮಾಯಿದೆ ದೇವುಸ್ ಚರ್ಚ್ ನಲ್ಲಿ ಭಕ್ತರು ನೀಡಿದ ಹಣ್ಣು ಹಂಪಲುಗಳು, ಧವಸ ಧಾನ್ಯಗಳು ತರಕಾರಿಗಳು ಸಹಿತ ಇತರ ಅಗತ್ಯ ವಸ್ತುಗಳ ಏಲಂ ಪ್ರಕ್ರಿಯೆಯು ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್ ರವರ ಮುಂದಾಳತ್ವದಲ್ಲಿ ಚರ್ಚ್ ವರಾಂಡದಲ್ಲಿ ಜರಗಿತು.
ಚರ್ಚ್ ನ ಐಸಿವೈಎಂ ಸಂಘಟನೆಯು ಏಲಂ ಪ್ರಕ್ರಿಯೆಯ ನೇತೃತ್ವ ವಹಿಸಿತ್ತು. ಸಂದೀಪ್ ಪಾಯಿಸ್, ಸಿಪ್ರಿಯಾನ್ ಮೊರಾಸ್, ವಿಜಯ್ ಡಿ’ಸೋಜರವರು ಏಲಂ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು. ನೂರಾರು ಭಕ್ತಾಧಿಗಳು ಏಲಂ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.