ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಅ. ೨೪ರಿಂದ ೨೮ರ ತನಕ ವಿವಿಧ ದಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್‍ಯಕ್ರಮವನ್ನು ಹಮ್ಮಿಕೊಳಲಾಗಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅ. 24ರಂದು ದೀಪಾವಳಿ ಸಲುವಾಗಿ ದೇವಳದ ಸುತ್ತಲೂ ಹಣತೆಯನ್ನು ಬೆಳಗಿಸಲಿದ್ದು, ಸಂಜೆ ನಡೆಯುವ ಸಂಭ್ರಮಾಚರಣೆಯಲ್ಲಿ ಸೇವಾ ರೂಪದಲ್ಲಿ ಭಾಗವಹಿಸುವುದಕ್ಕೆ ಅವಕಾಶವಿದ್ದು, ಪೂಜಾ ನಂತರ ಶ್ರೀ ದೇವರ ಬಲಿ ಉತ್ಸವ ನಡೆಯಲಿದೆ.
ಅ.25 ರಂದು ಸೂರ್ಯಗ್ರಹಣದಂದು ದೇವಳದಲ್ಲಿ ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ಟರ ಪೌರೋಹಿತ್ಯದಲ್ಲಿ ಸೂರ್ಯಗ್ರಹಣ ಶಾಂತಿ ಹವನವು ನಡೆಯಲಿದೆ.
ಅ. ೨೬ರಂದು ದೀಪಾವಳಿ ದಿನದಂದು ಗೋಧೊಳ ಲಗ್ನದಲ್ಲಿ ಗೋಪೂಜೆ ಕಾರ್ಯಕ್ರಮ ನಡೆಯಲಿದ್ದು, ಅ. ೨೮ರಂದು ಕೋಟಿಕಂಠ ಗಾಯನ ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.