ಪೆರಾಬೆ: ನೂರುಲ್ ಹುದಾ ಮದ್ರಸ ಕೋಚಕಟ್ಟೆ ಕುಂತೂರು ಇದರ ಆಶ್ರಯದಲ್ಲಿ ಪ್ರವಾದಿ(ಸ.ಅ.)ತಂಙಳ್‌ರವರ ಜನ್ಮದಿನದ ಪ್ರಯುಕ್ತ ಮಕ್ಕಳ ವಿವಿಧ ಪ್ರತಿಭಾ ಕಾರ್ಯಕ್ರಮ, 2 ದಿನಗಳ ಧಾರ್ಮಿಕ ಉಪನ್ಯಾಸ ಮದ್ರಸ ಅಧ್ಯಕ್ಷರಾದ ಬಶೀರ್ ಕೆ.ಪಿ.ಅವರ ನೇತೃತ್ವದಲ್ಲಿ ಅ.22 ಮತ್ತು 23 ರಂದು ಕೋಚಕಟ್ಟೆ ಮದ್ರಸದ ವಠಾರದಲ್ಲಿ ನಡೆಯಿತು.
ಅ.22ರಂದು ಸಂಜೆ ಮದ್ರಸ ಪ್ರಧಾನ ಅಧ್ಯಾಪಕರಾದ ಫಾರೂಕ್ ದಾರಿಮಿ ರೆಂಜರವರು ಅಲ್ಲಾಹುವಿನ ನಾಮದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು. ಮದ್ರಸದ ಉಪಾಧ್ಯಕ್ಷ ಫಯಾಝ್ ಝೆಡ್.ಬಿ. ಸ್ವಾಗತಿಸಿದರು. ನಂತರ ಮದ್ರಸ ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಕುಂತೂರು ದರ್ಸ್ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ನಡೆಯಿತು. ನಂತರ ಕುಂತೂರು ಜಮಾಅತ್ ಮುದರ್ರಿಸ್ ಹಾಜಿ ಮೊಯಿದು ಫೈಝಿಯವರಿಂದ ‘ಪ್ರವಾದಿ ಪ್ರೇಮ’ ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣ ನಡೆಯಿತು. ಕೋಚಕಟ್ಟೆ ಮದ್ರಸ ಹಾಗೂ ಕುಂತೂರು ಮಸೀದಿಯಲ್ಲಿ ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿ, ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ ಹಾಮದ್ ಹಾಜಿ ಅಜ್ಮೀರ್‌ರವರನ್ನು ಕಾರ್ಯಕ್ರಮದಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ದ.23ರಂದು ರಾತ್ರಿ ಸಮಾರೋಪ ಸಮಾರಂಭ ನಡೆಯಿತು. ಅಂತರಾಷ್ಟ್ರೀಯ ವಾಗ್ಮಿ ಅಲ್ ಹಾಪಿಲ್ ನಿಝಾಮುದ್ದೀನ್ ಅಝ್ಹರಿ ಕುಮ್ಮಣಂರವರು ಮುಖ್ಯ ಪ್ರಭಾಷಣ ನೀಡಿ, ಆಧುನಿಕ ಕಾಲಘಟ್ಟದಲ್ಲಿ ಯುವ ಸಮೂಹ ಹಲವಾರು ರೀತಿಯಲ್ಲಿ ದಾರಿ ತಪ್ಪುತ್ತಿದ್ದು ಮಾದಕ ವ್ಯಸನಗಳ ಗುಲಾಮರಾಗುತ್ತಿದ್ದಾರೆ. ಪ್ರತಿ ಮಹಲ್‌ಗಳಲ್ಲಿ ಇದರ ಬಗ್ಗೆ ಜಾಗರೂಕರಾಗಬೇಕು ಎಂದು ಹೇಳಿದರು. ಮದ್ರಸ ಅಧ್ಯಾಪಕರಾದ ಫಾರೂಕ್ ದಾರಿಮಿ ರೆಂಜ ಸ್ವಾಗತಿಸಿದರು. ಮೌಲೀದ್ ಪಾರಾಯಣ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕುಂತೂರು ಮಸೀದಿ ಅಧ್ಯಕ್ಷರಾದ ಇಬ್ರಾಹಿಂ ಕಜೆ, ಉಪಾಧ್ಯಕ್ಷರಾದ ಅನೀಸ್ ನೂಜಿಲ, ಕಾರ್ಯದರ್ಶಿ ಯಾಕೂಬ್ ಕೋಚಕಟ್ಟೆ, ಸದಸ್ಯರಾದ ಇಸ್ಮಾಯಿಲ್ ಅಲ್‌ಅಮಿನ್, ಹಸೈನಾರ್ ಸುರುಳಿ, ನೆಕ್ಕರೆ ಮಸೀದಿ ಅಧ್ಯಕ್ಷರಾದ ಅಬ್ದುಲ್ ಕುಂಞಿ ನೆಕ್ಕರೆ, ಖತೀಬರಾದ ಖಾಲಿದ್ ಫೈಝಿ, ಅಶ್ರಪ್ ಮುಸ್ಲಿಯಾರ್, ಸುರುಳಿ ಇಮಾಂ ಶೌಕತ್ತಲಿ ಅಸ್ಲಾಮಿ, ಕುಂತೂರು ಎಸ್‌ಕೆಎಸ್‌ಎಸ್‌ಎಫ್ ಶಾಖೆ ಅಧ್ಯಕ್ಷರಾದ ಮುಹಮ್ಮದ್ ಅಲಿ ಕೋಚಕಟ್ಟೆ, ಕೋಚಕಟ್ಟೆ ಮದ್ರಸ ಕೋಶಾಧಿಕಾರಿ ರಿಯಾಝ್ ಕೆ.ಎಂ.ಎಸ್., ಜೊತೆ ಕಾರ್ಯದರ್ಶಿ ಹನೀಫ್ ಅಲ್‌ಕೌಸರ್, ಯಾಕೂಬ್ ಕೆ.ಎಸ್., ಸದಸ್ಯರುಗಳಾದ ಲತೀಫ್ ಮಕ್ಬೂಲ್, ಉಮ್ಮರ್ ಪೊಸಳಿಗೆ, ಅಶ್ರಫ್ ಎಂ.ಕೆ., ಹಂಝ ಹೊಸಮನೆ, ಅಶ್ರಫ್ ಎಂ., ಕುಂತೂರು ಮಸೀದಿ ಮಾಜಿ ಅಧ್ಯಕ್ಷ ಅಬ್ಬಾಸ್ ಕೆಎಸ್‌ಆರ್‌ಟಿಸಿ, ಉದ್ಯಮಿ ಹಮೀದ್ ಅಜ್ಮೀರ್, ಮದ್ರಸ ಉಸ್ತಾದರುಗಳು, ನೂರುಲ್ ಹುದಾ ಯಂಗ್ ಮೆನ್ಸ್ ಸದಸ್ಯರು ಅಲ್ಲದೇ ಹಲವಾರು ಗಣ್ಯವ್ಯಕ್ತಿಗಳು, ನೂರಾರು ದೀನಿ ಪ್ರೇಮಿಗಳು ಭಾಗವಹಿಸಿದ್ದರು.