ಉಪ್ಪಿನಂಗಡಿ ದೇವಳದಲ್ಲಿ ಗ್ರಹಣ ಶಾಂತಿ ಹೋಮ

0

ಉಪ್ಪಿನಂಗಡಿ: ಸೂರ್ಯ ಗ್ರಹಣದ ಪ್ರಯುಕ್ತ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೆಶ್ವರ ದೇವಾಲಯದಲ್ಲಿ ಗ್ರಹಣ ಶಾಂತಿ ಹೋಮವು ನಡೆದು ಗ್ರಹಣ ಮೋಕ್ಷದ ಬಳಿಕ ನೂರಾರು ಭಕ್ತರು ನೇತ್ರಾವತಿ ನದಿಯಲ್ಲಿ ಪವಿತ್ರ ತೀರ್ಥ ಸ್ನಾನ ಗೈದರು.

ವೇದಮೂರ್ತಿ ಕಶೆಕೋಡಿ ಸೂರ್ಯ ನಾರಾಯಣ ಭಟ್ ರವರ ನೇತೃತ್ವದ ತಂಡದ ಪೌರೋಹಿತ್ಯದಲ್ಲಿ ನಡೆದ ಈ ಗ್ರಹಣ ಶಾಂತಿ ಹೋಮದಲ್ಲಿ ಗ್ರಹಣ ಸಮಯದ ಮಹತ್ವ, ಪಂಚಾಕ್ಷರಿ ಹಾಗೂ ಅಷ್ಠಾಕ್ಷರಿ ಮಂತ್ರಗಳ ಪಠಣಾ ಮಹತ್ವವನ್ನು ವಿವರಿಸಿ ಭಕ್ತಾದಿಗಳಿಂದ ಸಾಮೂಹಿಕ ಮಂತ್ರ ಪಠಣಾ ಕಾರ್ಯವನ್ನು ಮಾಡಿಸಿದರು. ಗ್ರಹಣ ಶಾಂತಿ ಹೋಮದ ಪೂರ್ಣಾಹುತಿಯ ಬಳಿಕ ಭಕ್ತರು ನೇತ್ರಾವತಿ ನದಿಯಲ್ಲಿ ಪುಣ್ಯ ತೀರ್ಥ ಸ್ನಾನವನ್ನು ಮಾಡಿ, ಪ್ರಸಾದ ಸ್ವೀಕರಿಸಿದರು. ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಹರಿರಾಮಚಂದ್ರ, ಸುನಿಲ್ ಆನಾವು, ಜಯಂತ ಪೊರೋಳಿ, ಪ್ರೇಮಲತಾ ಕಾಂಚನ, ಹರಿಣಿ ಕೆ, ಪ್ರಮುಖರಾದ ಸುಂದರ ಗೌಡ, ಚಂದಪ್ಪ ಮೂಲ್ಯ, ರವೀಂದ್ರ ಆಚಾರ್ಯ, ಏಕ ವಿದ್ಯಾಧರ ಜೈನ್, ಯು ರಾಧಾ, ಮಹಾಲಿಂಗ , ಶಾಂತರಾಮ ಭಟ್ ಕಾಂಚನ, ವೆಂಕಟೇಶ್ ರಾವ್, ಪದ್ಮನಾಭ ಕುಲಾಲ್, ಸುಧಾಕರ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here