ಸುದ್ದಿ ಬಿಡುಗಡೆಯ ಸಂಪಾದಕ ಡಾ. ಯು.ಪಿ. ಶಿವಾನಂದರ ಆಶಯದ ದ್ಯೋತಕವಾಗಿ ಸದ್ರಿ ಕೃಷಿ ಪ್ರವಾಸೋದ್ಯಮ ಜರಗಿದೆ ಎಂದು ಕಡಮಜಲು ಸುಭಾಸ್ ರೈ ಯವರು ಪ್ರಶಂಸೆ ವ್ಯಕ್ತಪಡಿಸಿದರು.
ಪುತ್ತೂರು: ಸಿರಿ ಕಡಮಜಲು ಕೃಷಿ ಕ್ಷೇತ್ರಕ್ಕೆ ವಿಶ್ವಹಿಂದು ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ವೆಲ್ರವರು ಅ. 23 ರಂದು ಭೇಟಿ ನೀಡಿದರು. ವಿ.ಹಿಂ.ಪ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಜೊತೆಗಿದ್ದರು. ಧರ್ಮಕ್ಷೇತ್ರದ ಸಂದರ್ಶನದಷ್ಟೇ ಕೃಷಿ ಕ್ಷೇತ್ರದ ಸಂದರ್ಶನ ನಮಗೆ ಆತ್ಮಸ್ಥೈರ್ಯ ನೀಡುತ್ತದೆ. ಕೃಷಿ ಕ್ಷೇತ್ರ ಸಂದರ್ಶನದಿಂದ ಸಂತೋಷವಾಗಿದೆ ಎಂದು ಶರಣ್ ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಭೂಮಾತೆ, ಗೋವುಮಾತೆ ಮತ್ತು ಗಂಗಾಪೂಜೆಯ ನಿತ್ಯ ಸತ್ಕಾರ್ಯ ಮತ್ತು ಪೂಜನೀಯ ಭಾವನೆಯ ಸೇವೆ ನಡೆಯುತ್ತದೆ. ಭೂದೇವಿಯ ಪೂಜೆಯಿಂದ ಭೂಮಿಯ ಮೌಲ್ಯವರ್ಧನೆಯಾಗುತ್ತದೆ. ಸಂತೃಪ್ತ ಬದುಕಿನ ಜೊತೆಯಲ್ಲಿ ಸಂಪತ್ತು ವೃದ್ದಿಸುತ್ತದೆ. ಇದನ್ನು ನಾನು ಶ್ರದ್ದಾಭಕ್ತಿಯಿಂದ ಮಾಡಿ ಸಂತೃಪ್ತ ಕೃಷಿಕನಾಗಿದ್ದೇನೆ’ ಎಂದು ಕೃಷಿಕ ಕಡಮಜಲು ಸುಭಾಸ್ ರೈ ಯವರು ಹೇಳಿ ಬಳಿಕ ಅತಿಥಿಗಳಿಗೆ ಹಾರಾರ್ಪಣೆ ಮಾಡಿ ತಾನು ಬರೆದ ಮೂರು ಕೃತಿಗಳನ್ನು ನೀಡಿ ಗೌರವಿಸಿದರು. ಪ್ರೀತಿ ಎಸ್. ರೈ ಸ್ವಾಗತಿಸಿ ವಂದಿಸಿದರು.