ಅ.29,30 ರಂದು ಕಾವು ನಲ್ಲಿ ಸತ್ಯಜಿತ್ ಟ್ರೋಫಿ ಅಂಡರ್‌ ಆರ್ಮ್ ಕ್ರಿಕೆಟ್ ಟೂರ್ನಮೆಂಟ್

0

ಪುತ್ತೂರು: ಸತ್ಯಜಿತ್ ಟೈಗರ್ಸ್ ಈಶ್ವರಮಂಗಲ ಇದರ ಆಶ್ರಯದಲ್ಲಿ ಎರಡನೇ ವರ್ಷದ ಸತ್ಯಜಿತ್ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಅ. 29 ಮತ್ತು 30 ರಂದು ಕಾವು ಅಂಬೇಡ್ಕರ್ ಮೈದಾನದಲ್ಲಿ ನಡೆಯಲಿದೆ.
ಅ.29 ರಂದು ಬೆಳಿಗ್ಗೆ ಪಂದ್ಯಾಟವನ್ನು ಕಾವು ಸಿ ಎ ಬ್ಯಾಂಕಿನ ಅಧ್ಯಕ್ಷರಾದ ನನ್ಯ ಅಚ್ಚುತ್ತ ಮೂಡೆತ್ತಾಯರು ಉದ್ಘಾಟಿಸಲಿದ್ದು, ಅತಿಥಿಗಳಾಗಿ ಅರಿಯಡ್ಕ ಗ್ರಾಪಂ ಅಧ್ಯಕ್ಷೆ ಸೌಮ್ಯಾ ಸುಭ್ರಹ್ಮಣ್ಯ, ಸದಸ್ಯರಾದ ಲೋಕೇಶ್ ಚಾಕೋಟೆ, ಜಯಂತಿ ಪತ್ತಮೂಲೆ, ರವೀಂದ್ರ ಮಂಜಕೊಟ್ಯ ಭಾಗವಹಿಸಲಿದ್ದಾರೆ.
ಅ. 30 ರಂದು ಅಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಬಂಟರಯಾನೆ ನಡವರ ಸಂಘ ಮಂಗಳೂರು ಇದರ ಪದಾಧ್ಯಕ್ಷ ಹೇಮನಾಥ್ ಶೆಟ್ಟಿ ಕಾವು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್, ರಾಷ್ಟ್ರೀಯ ಜಾಗರಣಾ ವೇದಿಕೆ ಸಂಸ್ಥಾಪಕರಾದ ಮಹೇಶ್ ಶೆಟ್ಟಿ ತಿಮರೋಡಿ, ರಾಮಸೇನೆ ಅಧ್ಯಕ್ಷ ಪ್ರಸಾದ್ ಅತ್ತವರ, ಸತ್ಯಜಿತ್ ಟೈಗರ್ಸ್ ಈಶ್ವರಮಂಗಲ ಇದ ಸ್ಥಾಪಕಾಧ್ಯಕ್ಷರಾದ ಶಶಿಧರ್ ಪೂಜಾರಿ ಪುತ್ತೂರು ಗ್ರಾಮಾಂತರ ಎಸ್ ಐ ಉದಯರವಿ,ಗೆಜ್ಜೆಗಿರಿ ನಂದನ ಬಿತ್ತ್‌ಲ್ ಗೌರವಾಧ್ಯಕ್ಷರಾದ ಜಯಂತ ನಡುಬೈಲು, ಕುಂಬ್ರ ಮಾತೃಶ್ರೀ ಸಂಸ್ಥೆಯ ಮಾಲಕರಾದ ಮೋಹನ್‌ದಾಸ್ ರೈ ಕುಂಬ್ರ, ರವಿಕರಣ್ ಶೆಟ್ಟಿ ಬೆದ್ರಾಡಿ, ನೆ.ಮುಡ್ನೂರು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ,ವಿಟ್ಲ ಯುವ ವಾಹಿನಿ ಅಧ್ಯಕ್ಷರಾದ ಯಶವಂತ್ ವಿಟ್ಲ, ಜನಾರ್ಧನ ಪೂಜರಿ ಪದಡ್ಕ, ದನಂಜಯ ಪಟ್ಲ ಕಲ್ಲೆಗ, ಭರತ್ ರೈ ಮೂಡಾಯೂರು, ಶ್ರೀರಾಮ ಸೇವೆ ಶಿವಮೊಗ್ಗ ಜಿಲ್ಲಾಧ್ಯಕ್ಷ ಪ್ರಶಾಂತ್ ಬಂಗೇರ, ಗ್ರಾಪಂ ಸದಸ್ಯ ಮೋನಪ್ಪ ಪೂಜರಿ ಕೆರೆಮಾರು, ಸತ್ಯಜಿತ್ ಟೈಗರ್ಸ್ ಈಶ್ವರಮಂಗಲ ಇದರ ಅಧ್ಯಕ್ಷ ಪ್ರವೀಣ್ ಪೂಜರಿ ಸುರುಳಿಮೂಲೆ, ಅಕ್ಷಯ್ ರಜಪೂತ್ ಕಲ್ಲಡ್ಕ, ಗ್ರಾಪಂ ಸದಸ್ಯ ವಿಜಿತ್ ಕೆರೆಮಾರು, ಉದಯ ಪಾಟಾಳಿ ಬೆಳ್ಳಾರೆ, ಸಹಜ್ ರೈ ಬಳೆಜ್ಜ ಮೊದಲಾದವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಲೋ ಬೈಕ್ ಬ್ಯಾಲೆನ್ಸ್ ಸ್ಪರ್ದೆ ನಡೆಯಲಿದೆ. ಕ್ರಿಕೆಟ್ ಪಂದ್ಯಾಟದ ಪ್ರಥಮ ಬಹುಮಾನವಾಗಿ 10 ಸಾವಿರ ರೂ, ದ್ವಿತೀಯ ಬಹುಮಾನವಾಗಿ ರೂ 5 ಸಾವಿರ ನಿಗಧಿಪಡಿಸಲಾಗಿದೆ.

LEAVE A REPLY

Please enter your comment!
Please enter your name here