ಪುತ್ತೂರು:ಮುಂಡೂರು ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ದಾರದ ಕೆಲಸ ಕಾರ್ಯಗಳು ಬರದಿಂದ ಸಾಗುತ್ತಿದ್ದು, ಇದರ ಪೂರ್ವಭಾವಿಯಾಗಿ ನಡೆದ ಸಭೆಯು ಒತ್ತೆಕೋಲ ಸಮಿತಿಯ ಅಧ್ಯಕ್ಷ ಭಾಸ್ಕರ ಆಚಾರ್ ಹಿಂದಾರ್ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ಧ ಖ್ಯಾತ ವೈದ್ಯರಾದ ಮಹಾವೀರ ಆಸ್ಪತ್ರೆಯ ಡಾ. ಸುರೇಶ್ ಪುತ್ತೂರಾಯರವರು ವಿಜ್ಞಾಪನ ಪತ್ರವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಎಲ್ಲರ ಸಹಕಾರದೊಂದಿಗೆ ದೈವಸ್ಥಾನದ ಜೀರ್ಣೋದ್ಧಾರದ ಕಾರ್ಯಗಳು ಶೀಘ್ರವಾಗಿ ನಡೆದು, ವೈಭವದ ಬ್ರಹ್ಮಕಲಶೋತ್ಸವ ನೆರವೇರುವಂತಾಗಲಿ ಎಂದು ಆಶಿಸಿದರು.
ಬಳಿಕ ನಡೆದ ಸಭೆಯಲ್ಲಿ ದೈವಸ್ಥಾನದ ಜೀರ್ಣೋದ್ಧಾರದ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಒತ್ತೆಕೋಲ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ, ಕೋಶಾಧಿಕಾರಿ ಹುಕ್ರ ಮಾಸ್ಟರ್, ಈಶ್ವರ ಅಜಲಾಡಿ, ಮುರಳೀಧರ ಭಟ್ ಬಂಗಾರಡ್ಕ, ರಘುನಾಥ ಶೆಟ್ಟಿ ಪನೋನಿ, ಉಮೇಶ್ ಗೌಡ, ಸೀತಾರಾಮ ಶೆಟ್ಟಿ, ಜಯರಾಮ ಬಿ. ಎನ್., ಬಾಲಕೃಷ್ಣ ಶೆಟ್ಟಿ , ವಿನೋದ್ ಶೆಟ್ಟಿ, ಸುಧಾಕರ ಕುಲಾಲ್, ನಾಗೇಶ್ ಭಟ್, ಪದ್ಮನಾಭ, ನೀಲಪ್ಪ ಪೂಜಾರಿ, ಶೀನಪ್ಪ ಪೂಜಾರಿ, ಜಯಾನಂದ ಆಳ್ವ, ಸೀತಾರಾಮ ಶೆಟ್ಟಿ, ಯಶವಂತ, ಬಾಲಕೃಷ್ಣ, ದೇವಪ್ಪ ಗೌಡ, ಬಾಲಚಂದ್ರ ಕಡ್ಯ, ಸೀತಾರಾಮ್ ಆಚಾರ್ಯ, ಶೀನಪ್ಪ ನಾಯ್ಕ, ಚಂದ್ರಹಾಸ, ರಾಮ, ಪುರುಷೋತ್ತಮ ಬಂಗೇರ, ಹರೀಶ್ ನಾಯ್ಕ, ಈಶ್ವರ ನಾಯ್ಕ, ರಾಮಣ್ಣ ಗೌಡ, ಶೇಶಪ್ಪ ಶೆಟ್ಟಿ, ಪ್ರವೀಣ್ ಮುಲಾರ್, ಭದ್ರಯ್ಯ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ಅರ್ಚಕ ನಾಗೇಶ್ ಕುದ್ರೆತ್ತಾಯ ಪ್ರಾರ್ಥಿಸಿದರು.ಕಾರ್ಯರ್ಶಿ ಗಣೇಶ್ ಸುವರ್ಣ ಬೊಲ್ಲಗುಡ್ಡೆ ಸ್ವಾಗತಿಸಿ, ಕೋಶಾಧಿಕಾರಿ ಅನಿಲ್ ಕುಮಾರ್ ಕರ್ಣ್ಣಾನೂಜಿ ವಂದಿಸಿದರು.