ಕಾವು: ವಿಶ್ವ ಹಿಂದೂ ಪರಿಷತ್- ಬಜರಂಗದಳ ಹಾಗೂ ಗೋಪೂಜಾ ಸಮಿತಿ ಕಾವು ಇದರ ನೇತೃತ್ವದಲ್ಲಿ 11ನೇ ವರ್ಷದ ಸಾಮೂಹಿಕ ಗೋಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಅ 30 ರಂದು ಸಂಜೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.ಅರ್ಚಕರಾದ ಶಿವ ಪ್ರಸಾದ್ ಕಡಮಣ್ಣಾಯರ ಪೌರೋಹಿತ್ಯದಲ್ಲಿ ಗೋಪೂಜೆ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮ
ಗೋ ಸೇವೆಯ ಮೂಲಕ ಆರೋಗ್ಯ ವೃದ್ಧಿ -ಸೀತಾರಾಮ ಭಟ್
ಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣ ಮಾಡಿದ ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಸೇವಾ ಪ್ರಮುಖ್ ಸೀತಾರಾಮ ಭಟ್ ಮಾತನಾಡಿ ಸನಾತನ ಹಿಂದೂ ಧರ್ಮದಲ್ಲಿ ಗೋವುಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದ್ದು ಗೋಮಾತೆಯನ್ನು ಸಾಕುವುದರೊಂದಿಗೆ ಗೋವಿನ ಸೇವೆ ಮಾಡುವುದರಿಂದ ಉತ್ತಮ ಆರೋಗ್ಯ ವೃದ್ಧಿಸಲು ಸಾಧ್ಯ, ಗೋವು ಹಾಗೂ ಹಿಂದೂ ಧರ್ಮದ ಶ್ರದ್ಧಾ ಕೇಂದ್ರಗಳ ಮೇಲಾಗುತ್ತಿರುವ ದಾಳಿ ಹಾಗೂ ದೌರ್ಜನ್ಯಗಳನ್ನು ಎದುರಿಸಲು ಹಿಂದೂ ಸಮಾಜ ಸಂಘಟಿತರಾಗಬೇಕು ಎಂದರು.
ಗೋವು ಮಾನವನ ಜೀವನದ ಒಂದು ಅವಿಭಾಜ್ಯ ಅಂಗ – ಚಂದ್ರಶೇಖರ ರಾವ್ ನಿಧಿಮುಂಡ
ಕಾವು ಶ್ರೀಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ರಾವ್ ನಿಧಿಮುಂಡ ಮಾತನಾಡಿ ಕೃಷಿ ಚಟುವಟಿಕೆ,ಆರ್ಥಿಕವಾಗಿ, ಧಾರ್ಮಿಕವಾಗಿ, ಔಷಧಿ ತಯಾರಿಕೆ ಹಾಗೂ ವಾತಾವರಣ ಶುದ್ಧಿಕರಣದಲ್ಲಿ ಗೋವು ಪ್ರಮುಖ ಪಾತ್ರ ವಹಿಸಿರುವ ಕಾರಣ ಗೋವು ಮಾನವನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದ್ದು , ಸ್ವ ದೇಶೀಯ ದನಗಳನ್ನು ಪ್ರತಿ ಹಿಂದೂ ಮನೆಯಲ್ಲಿ ಸಾಕುವಂತಾಗಬೇಕು ಎಂದರು.
ಹಿಂದೂ ಧರ್ಮದ ಆರಾಧನಾ ಶಕ್ತಿ ಗೋವು- ಲತೇಶ್ ಗುಂಡ್ಯ.
ಪುತ್ತೂರು ಜಿಲ್ಲಾ ಬಜರಂಗದಳ ಸಹ ಸಯೋ0ಜಕರು ಲತೇಶ್ ಗುಂಡ್ಯ ಮಾತನಾಡಿ ಧಾರ್ಮಿಕ ನಂಬಿಕೆಯ ಪ್ರಕಾರ 33 ಕೋಟಿ ದೇವತೆಗಳು ನೆಲೆಸಿರುವ ಗೋವು ಹಿಂದೂ ಧರ್ಮದ ಆರಾಧನಾ ಶಕ್ತಿಯಾಗಿದ್ದು ,ಗೋವಿನ ದರ್ಶನ ಹಾಗೂ ಗೋವಿನ ನಿತ್ಯ ಸೇವೆಯಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗಲು ಸಾಧ್ಯ ಎಂದರು.
ಗೋ ಪೂಜೆಯೊಂದಿಗೆ ಧರ್ಮಜಾಗೃತಿಗೊಳಿಸುವ ಕಾರ್ಯ- ಭಾಸ್ಕರ ಬಲ್ಯಾಯ
ಗೋಪೂಜಾ ಸಮಿತಿ ಕಾವು ಇದರ ಗೌರವಾದ್ಯಕ್ಷರಾದ ಭಾಸ್ಕರ ಬಲ್ಯಾಯ ಮಾತನಾಡಿ 11 ವರ್ಷಗಳಿಂದ ಯಶಸ್ವಿಯಾಗಿ ಗೋಪೂಜಾ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು ಜೊತೆಗೆ ಜನರಲ್ಲಿ ಧರ್ಮ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಭಜನಾ ಕಾರ್ಯಕ್ರಮ ,ಗೀತಾ ಸಾಹಿತ್ಯ ಸಂಭ್ರಮ ದೊಂದಿಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ಕಾರ್ಯ ಗೋಪೂಜಾ ಸಮಿತಿಯಿಂದ ನಡೆಯುತ್ತಿದೆ ಎಂದರು.
ಸಾಮೂಹಿಕ ಗೋಪೂಜೆಯೊಂದಿಗೆ ಗೋವಿನ ಮಹತ್ವ ತಿಳಿಸುವ ಕಾರ್ಯ ಗೋಪೂಜಾ ಸಮಿತಿಯಿಂದ ನಡೆಯುತ್ತಿದೆ ನಹುಷಾ ಭಟ್ ಪಳನೀರು
ಧಾರ್ಮಿಕ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಗೋಪೂಜಾ ಸಮಿತಿ ಕಾವು ಇದರ ಅಧ್ಯಕ್ಷರಾದ ನಹುಷಾ ಭಟ್ ಭಾರತ ದೇಶವು ಕೃಷಿ ಸಂಪತ್ತು ಭರಿತ ದೇಶವಾಗಬೇಕಾದರೆ ಗೋವಿನ ಪಾತ್ರ ಮಹತ್ವದ್ದು,ಹಾಗಾಗಿ ವರ್ಷಕ್ಕೊಮ್ಮೆ ಸಾಮೂಹಿಕ ಗೋ ಪೂಜೆ ನಡೆಸುವುದರ ಜೊತೆಗೆ ಗೋವಿನ ಮಹತ್ವ ತಿಳಿಸುವ ಕಾರ್ಯ ಸುಮಾರು 11 ವರ್ಷದಿಂದ ಗೋಪೂಜಾ ಸಮಿತಿ ನಡೆಸುತ್ತಿದೆ,ಮುಂದೆಯೂ ಕಾರ್ಯಕ್ರಮದ ಯಶಸ್ವಿಗೆ ನಿಮ್ಮೆಲ್ಲಾರ ಸಹಕಾರ ಅಗತ್ಯ ಎಂದರು
ವೇದಿಕೆಯಲ್ಲಿ ಪುತ್ತುರು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ ತೆಂಕಿಲ, ಬಜರಂಗದಳ ಗ್ರಾಮಾಂತರ ಸುರಕ್ಷಾ ಪ್ರಮುಖ್ ಅಜಿತ್ ಕೆಯ್ಯುರೂ ಉಪಸ್ಥಿತರಿದ್ದರು.
ಭಜನಾ ಕಾರ್ಯಕ್ರಮ
ಗೋಪೂಜಾ ಕಾರ್ಯಕ್ರಮ ಮೊದಲಿಗೆ ಸುಜ್ಞಾನ ಮಕ್ಕಳ ಭಜನಾ ತಂಡ, ಪಂಚಲಿಂಗೇಶ್ವರ ಭಜನಾ ತಂಡ, ಓಂ ಶಕ್ತಿ ಭಜನಾ ತಂಡ ಪಳನೀರು, ದುರ್ಗಾವಾಹಿನಿ ಭಜನಾ ತಂಡ ಮಾಣಿಯಡ್ಕ ಇವರುಗಳಿಂದ ಭಜನಾ ಸಂಕೀರ್ತನೆ ನಡೆಯಿತು.
ಸನ್ಮಾನ ಕಾರ್ಯಕ್ರಮ
ಸುಮಾರು 11 ವರ್ಷಗೆಳಿಂದ ಗೋಪೂಜೆ ಕಾರ್ಯಕ್ರಮ ನಡೆಸಿಕೊಡುತ್ತಿರುವ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶಿವಪ್ರಸಾದ್ ಕಡಮಣ್ಣಾಯ,ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಅಗ್ನಿಪಥ್ ನಲ್ಲಿ ಲಿಖಿತ ಪರೀಕ್ಷೆಗೆ ಗೆ ಆಯ್ಕೆಗೊಂಡ ಅವಿನ್ ಮಾಣಿಯಡ್ಕ, ಹಾಗೂ ಶೈಕ್ಷಣಿಕ ಕ್ಷೇತ್ರದ ಎಂಕಾಂ ಪಿನಾನ್ಸ್ ವಿಭಾಗದಲ್ಲಿ ಸಾಧನೆಗೈದ ನವ್ಯಶ್ರೀ ಡೆಂಬಾಳೆ ಇವರುಗಳಿಗೆ ಶಾಲು ಹೊದಿಸಿ, ಹಣ್ಣು ಹಂಪಲು, ಹೂ ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು,ಹಾಗೂ ಗೋಪೂಜೆ ಕಾರ್ಯಕ್ಕೆ ಅಲಂಕಾರ ನಡೆಸಿದ ಪವನ್ ಆಚಾರ್ಯ ಕಾವು,ಭಜನಾ ಕಾರ್ಯಕ್ರಮ ನಡೆಸಿದ ಭಜನಾ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ
ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ವಿಠಲ್ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.
ಗೋಪೂಜಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಮಾಣಿಯಡ್ಕ, ಬಜರಂಗದಳ ಕಾವು ಘಟಕದ ಸಂಚಾಲಕ ಕಿರಣ್ ಕಾವು,ಸೀತಾರಾಮ ಬಾಳೆಕೊಚ್ಚಿ, ನವನೀತ್ ಬಾಳೆಕೊಚ್ಚಿ, ವಿಶ್ವನಾಥ ಬಾಳೆಕೊಚ್ಚಿ, ಕೃಷ್ಣಪ್ಪ ಬಾಳೆಕೊಚ್ಚಿ, ಜಯರಾಮ ಪುವಂದೂರು ಅತಿಥಿಗಳನ್ನು ಶಾಲು ಹಾಕಿ ಗೌರವಿಸಿದರು
ಕಾರ್ಯಕ್ರಮದಲ್ಲಿ ಅನಿಕಾ ಕುಂಜತ್ತಾಯ ಪ್ರಾರ್ಥಿಸಿದರು, ಗೋಪೂಜಾ ಸಮಿತಿ ಗೌರವಾಧ್ಯಕ್ಷರು ಭಾಸ್ಕರ ಬಲ್ಯಾಯ ಸ್ವಾಗತಿಸಿದರು.ಗೌರವ ಸಲಹೆಗಾರರು ಹರೀಶ್ ಕುಂಜತ್ತಾಯ ವಂದಿಸಿದರು. ಪುತ್ತೂರು ಪ್ರಖಂಡ ಬಜರಂಗಳ ಗ್ರಾಮಾಂತರ ಸ0ಯೋಜಕರು ವಿಶಾಖ್ ಸಹಿಹಿತ್ಳು ಕಾರ್ಯಕ್ರಮ ನಿರ್ವಹಿಸಿದರು.