ಬಡಗನ್ನೂರುಃ ಶ್ರೀ ಕ್ಷೇತ್ರ ಗೆಜ್ಜೆಗಿರಿ ನೂತನ ಯಕ್ಷಗಾನ ಮೇಳದ ಉದ್ಘಾಟನೆ ಹಾಗೂ ಪ್ರಥಮ ದೇವರ ಸೇವೆಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನ..2 ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯಿತು.
ನ. 27 ರಂದು ಉದ್ಘಾಟನೆಗೊಳ್ಳಲಿರುವ ಶ್ರೀ ಅದಿ ಧೂಮಾವತಿ ,ಶ್ರೀ ದೆಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ತಾನ ಗೆಜ್ಜೆಗಿರಿ “ಶ್ರೀ ಗೆಜ್ಜೆಗಿರಿ” ಮೇಳ ಉದ್ಘಾಟನೆ ಹಾಗೂ ದೇವರ ಪ್ರಥಮ ಸೇವ ಆಟ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ಕ್ಷೇತ್ರದ ಆಡಳಿತ ಸಮಿತಿಯ ಟ್ರಸ್ಟಿ ಹಾಗೂ ಕಂಕನಾಡಿ ಗರಡಿಯ ಅಧ್ಯಕ್ಷ ಚಿತ್ತರಂಜನ್ ಕೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕ್ಷೇತ್ರದ ಶಕ್ತಿಗಳ ಮಹಿಮೆ ಜಗತ್ಪ್ರಸಿದ್ಧವಾಗಲಿ ,ಕೆಲಸ ಮಾಡುವ ಕಲಾವಿದರಿಗೆ ಹಾಗೂ ಎಲ್ಲರಿಗೂ ಒಳ್ಳೆಯ ಶಕ್ತಿ ನೀಡಲಿ ಎಂದು ಹಾರೈಸಿದರು.
ಕ್ಷೇತ್ರದ ಅನುವಂಶಿಕ ಆಡಳಿತ ಮೂಕ್ತೇಸರ ಶ್ರೀಧರ ಪೂಜಾರಿ ಮಾತನಾಡಿ ಕಥೆಗಳು ಚರಿತ್ರೆಯಾಗಿ ರೂಪುಗಳ್ಳಬೇಕು ಮತ್ತು ಕಥೆ ಒಳ್ಳೆಯ ರೀತಿಯಲ್ಲಿ ಇರಬೇಕು ಮೂಲ ಸ್ಥಾನ ಮಹಿಮೆ ತಿಳಿಸುವ ತಾಯಿ ಧೂಮಾವತಿ ಉತ್ತಮ ಆರೋಗ್ಯ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಶುಭ ಹಾರೈಸಿದರು.
ಕ್ಷೇತ್ರಾಡಳಿತ ಸಮಿತಿಯ ಗೌರವ ಅಧ್ಯಕ್ಷ ಜಯಂತ ನಡುಬೈಲ್ ಮಾತನಾಡಿ ಗೆಜ್ಜೆಗಿರಿ ಮಹಿಮೆ ಇಡೀ ಜಗತ್ತಿನಲ್ಲಿ ಪ್ರಸಾರಲಿ ಎಂದು ಹಾರೈಸಿದರು.
ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ ದೈವ ಸಂಕಲ್ಪದಿಂದ ಕ್ಷೇತ್ರದ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತ ಬರುತ್ತಿದೆ. ಕ್ಷೇತ್ರದ ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಚರಿತ್ರೆ ಸೃಷ್ಟಿಸಿದೆ. ಯಕ್ಷಗಾನ ಮೇಳದ ಮೂಲಕ ಕ್ಷೇತ್ರದ ಶಕ್ತಿ ಮಹಿಮೆ ಬಗ್ಗೆ ಜನರಿಗೆ ತಿಳಿಯುತ್ತದೆ.ಆ ಮೂಲಕ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಗತ್ತಿಗೆ ಪ್ರಸಿದ್ಧವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ನವೀನ್ ಸುವರ್ಣ, ನವೀನ್ ಸಜೀಪ, ಸತೀಶ್ ಪೂಜಾರಿ ಖತರ್, ಟ್ರಸ್ಟಿ ರಾಜಾರಾಂ, ನಿತೀನ್, ದಿನೇಶ್, ಜನಾರ್ದನ ಪುಜಾರಿ ಪದಡ್ಕ ವಿಶ್ವನಾಥ ಪೂಜಾರಿ ಪೇರಾಲು, ಜಯರಾಮ ಪುಜಾರಿ ಕೆಲಂದೂರು, ದೀಪಕ್ ಕೊಟ್ಯಾನ್ ನಾರಾಯಣ ಕಟ್ಟಿನರ್ ಸತೀಶ್ ವಿಶ್ವನಾಥ, ಪೂಜಾರಿ ಡಿ.ಟಿ, ಹಾಗೂ ಯಕ್ಷಗಾನ ಕಲಾವಿದರು , ಕ್ಷೇತ್ರಾಢಳಿತ ಸಮಿತಿ ನಿರ್ದೇಶಕರು, ಹಾಗೂ ಊರ ಭಕ್ತಾಧಿಗಳು ಉಪಸ್ಥಿತರಿದ್ದರು.
ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ದೀಪಕ್ ಕೋಟ್ಯಾನ್ ವಂದಿಸಿದರು.