ಪಶುಸಂಗೋಪನಾ ಇಲಾಖೆಯಿಂದ ಹೈನುಗಾರರಿಗೆ ರಬ್ಬರ್ ಮ್ಯಾಟ್ ವಿತರಣೆ

0

ಪುತ್ತೂರು; ದ.ಕ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ 2021-22 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಹಾಯಧನದಲ್ಲಿ ರಬ್ಬರ್ ನೆಲಹಾಸು(ಮ್ಯಾಟ್)ವಿತರಣೆಯು ನ.2ರಂದು ಪಶು ಆಸ್ಪತ್ರೆಯ ಆವರಣದಲ್ಲಿ ನಡೆಯಿತು.
ಮ್ಯಾಟ್ ವಿತರಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪಶುಸಂಗೋಪನೆ ಇಲಾಖೆಯ ಮೂಲಕ ಹೈನುಗಾರರಿಗೆ ವಿವಿಧ ಸವಲತ್ತುಗಳನ್ನು ವಿತರಿಸುವುದಲ್ಲದೆ ಇಲಾಖೆಯಲ್ಲಿ ಖಾಲಿಯಿರುವ ವೈದ್ಯರು ಹಾಗೂ ಪರಿವೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸ ಸರಕಾರದಂದ ಆಗುತ್ತಿದೆ ಎಂದರು. ಹಸು ಆರೋಗ್ಯ ರಕ್ಷಣೆ, ಹಟ್ಟಿಯ ಸ್ವಚ್ಚತೆಗೆ ರಬ್ಬರ್ ಮ್ಯಾಟ್ ಅನುಕೂಲವಾಗಲಿದೆ. ಸರಕಾರಿಂದ ಸಹಾಯಧನದಲ್ಲಿ ಯಂತ್ರೋಪಕರಣಗಳನ್ನು ಬಳಸಿಕೊಂಡು ವಿತರಿಸಲಾಗುತ್ತಿದ್ದು ಅವುಗಳನ್ನು ಬಳಸಿಕೊಂಡು ಹೈನುಗಾರಿಕೆಯಲ್ಲಿ ಅಧಿಕ ಲಾಭ ಪಡೆಯುವಂತೆ ಶಾಸಕರು‌ ತಿಳಿಸಿದರು.
ಹದಿನೆಂಟು ಮಂದಿ ಫಲಾನುಭವಿಗಳಿಗೆ ರಬ್ಬರ್ ಮ್ಯಾಟ್ ವಿತರಿಸಲಾಯಿತು.
ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಸ್ವಾಗತಿಸಿ, ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಇಲಾಖೆಯ ಅಧಿಕಾರಿ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here