ಬೀರಮಲೆ ಬೆಟ್ಟದಲ್ಲಿ ನಾಯಿಗಳ ಕಾಟ

0
ಸಾಂದರ್ಭಿಕ ಚಿತ್ರ

ಪುತೂರು: ಇಲ್ಲಿನ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಬೀರಮಲೆ ಬೆಟ್ಟದ ರಸ್ತೆಯಲ್ಲಿ ಸುಮಾರು 20 ರಿಂದ 25 ನಾಯಿಗಳು ರಸ್ತೆಯಲ್ಲಿ ಹೋಗುತ್ತಿರುವ ನಾಗರಿಕರಿಗೆ, ದ್ವಿಚಕ್ರ ವಾಹನ ಸವಾರರಿಗೆ ವಿಪರೀತ ತೊಂದರೆಯನ್ನು ಉಂಟುಮಾಡುತ್ತಿರುವುದಾಗಿ ಸಾರ್ವಜನಿಕರಿಂದ ದೂರು ವ್ಯಕ್ತವಾಗಿದೆ. ಬೆಳಗಿನ ಜಾವದಲ್ಲಿ ಬೀರಮಲೆ ಬೆಟ್ಟಕ್ಕೆ ವಾಕಿಂಗ್ ಬಂದವರನ್ನು ನಾಯಿಗಳು ಅಟ್ಟಿಸಿಕೊಂಡು ಬರುತ್ತಿವೆ. ಸಂಬಂಧ ಪಟ್ಟವರು ಈ ಬಗ್ಗೆ ಗಮನಹರಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here