ಮುಕ್ರಂಪಾಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ 9ನೇ ಶಾಖೆ ಉದ್ಘಾಟನೆ

0

ಪುತ್ತೂರು: ಶ್ರೀ ಪತಂಜಲಿ ಯೋಜ ಶಿಕ್ಷಣ ಸಮಿತಿಯ 9ನೇ ಶಾಖೆ ಮುಕ್ರಂಪಾಡಿ ಸುಭದ್ರ ಕಲಾಮಂದಿರದಲ್ಲಿ ನ. 7ರಂದು ಉದ್ಘಾಟನೆಗೊಂಡಿತು.
ಸುಭದ್ರ ಕಲಾಮಂದಿರದ ಮಾಲಕ ಗಿರೀಶ್ ಉದ್ಘಾಟಿಸಿ, ಸಂಸ್ಕಾರ, ಸಂಘಟನೆ, ಸೇವೆ ಎನ್ನುವ ಧ್ಯೇಯದಿಂದ ದೇಶಾದ್ಯಂತ 43 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಎಸ್‍ಪಿವೈಎಸ್‍ಎಸ್ (ಶ್ರೀ ಪತಂಜಲಿ ಯೋಜ ಶಿಕ್ಷಣ ಸಮಿತಿ)ನ 48 ದಿನಗಳ ಉಚಿತ ಯೋಗ ತರಗತಿಯನ್ನು ಹಮ್ಮಿಕೊಂಡಿರುವುದು ಉತ್ತಮ ವಿಚಾರ. ಯೋಗ ತರಗತಿಗಳು ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸೈನಿಕ, ಕಾರ್ಪೋರೇಷನ್ ಬ್ಯಾಂಕ್ ನಿವೃತ ಮೆನೇಜರ್ ಹಾಗೂ ಸಮಿತಿಯ ಆಫೀಸರ್ಸ್ ಕ್ಲಬ್ ಶಾಖೆಯ ಶಿಕ್ಷಕ ದಯಾನಂದ್ ಮಾತನಾಡಿ, ಯೋಗ ಸಮಿತಿಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಕನಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಷಾಮಣಿ ಪ್ರಾರ್ಥಿಸಿದರು. ಸಂಧ್ಯಾ ಸ್ವಾಗತಿಸಿ, ಸುಮನ ವಂದಿಸಿದರು. ದಮಯಂತಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ತಾಲೂಕು ಸಂಚಾಲಕ ಯೊಗೀಶ್, ಸಹಸಂಚಾಲಕ ಅಶೋಕ್ ಸಹಕರಿಸಿದರು. 122 ಮಂದಿ ಶಿಬಿರದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here