ಪುತ್ತೂರು: ಚಂಡೀಗಢ ಮೊಹಾಲಿಯಲ್ಲಿರುವ ಭಾರತ ಸರಕಾರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ಎಜುಕೇಶನ್ ಏಂಡ್ ರಿಸರ್ಚ್ (IISER) ಸಂಸ್ಥೆಯಲ್ಲಿ ಮೂಲ ವಿಜ್ಞಾನ ಮತ್ತು ಸಂಶೋಧನೆಯಲ್ಲಿ (BS-MS Dual Course) 5ವರ್ಷಗಳ ಉನ್ನತ ಅಧ್ಯಯನಕ್ಕಾಗಿ ರಾಕೇಶ್ಕೃಷ್ಣ ಆಯ್ಕೆಯಾಗಿದ್ದಾರೆ.
ರಾಕೇಶ್ಕೃಷ್ಣ ಅವರು ಕಿರಿಯ ವಯಸ್ಸಿನಲ್ಲಿಯೇ 2016ರಲ್ಲಿ ವಿಜ್ಞಾನ ಸಂಶೋಧನೆಯಲ್ಲಿ ರಾಷ್ಟ್ರೀಯ ಮಟ್ಟದ ಇನ್ಸ್ಪೈರ್ ಗೋಲ್ಡನ್ ಎವಾರ್ಡ್ ಪಡೆದಿದ್ದು, ತಮ್ಮ ನೂತನ ವಿಜ್ಞಾನ ಆವಿಷ್ಕಾರಕ್ಕಾಗಿ 2021ರಲ್ಲಿ ಪ್ರಧಾನಮಂತ್ರಿ ಬಾಲಪುರಸ್ಕಾರವನ್ನು ಪಡೆದಿರುತ್ತಾರೆ.
ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಮತ್ತು ಮಂಗಳೂರಿನ ವಳಚ್ಚಿಲ್ ಎಕ್ಸ್ಪರ್ಟ್ ಪಿ.ಯು ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಇವರು ವಿವೇಕಾನಂದ ಕಾಲೇಜು (ಸ್ವಾಯತ್ತ) ಹಿಂದಿ ವಿಭಾಗ ಮುಖ್ಯಸ್ಥರಾಗಿರುವ ಡಾ| ದುರ್ಗಾರತ್ನ ಮತ್ತು ಬನ್ನೂರು ನೆಕ್ಕಿಲದ ಕೃಷಿಕ ರವಿಶಂಕರರವರ ಸುಪುತ್ರ.