ಸುದ್ದಿ ಬಿಡುಗಡೆ ನಡೆ ಜನಸಾಮಾನ್ಯರ ಕಡೆಗೆ : ಆರ್ಥಿಕ ಸಂಪಾದನೆ ಕಡಿಮೆ ಆದರೂ ಜನಸೇವೆಯ, ಆಪದ್ಭಾಂಧವರಾಗಿರುವ ರಿಕ್ಷಾ ಚಾಲಕರ ಬದುಕು ಹಸನಾಗಲಿ

0

38 ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯು ರಾಜಕೀಯ ನಾಯಕರ ಕೆಲಸ ಕಡಿಮೆ ಮಾಡಿ ಜನಸಾಮಾನ್ಯರ ಸೇವೆ ಮಾಡುತ್ತಿರುವವರ ಬದುಕಿಗೆ ಬೆಳಕಾಗುವ ಚಿಂತನೆ ಮಾಡಿದೆ. ಅದಕ್ಕಾಗಿ ಮೊದಲನೆಯದಾಗಿ ಜನಸಾಮಾನ್ಯರ ಆಪದ್ಭಾಂಧವರಾಗಿರುವ ಪುತ್ತೂರಿನಲ್ಲಿರುವ 5,550 ರಿಕ್ಷಾ ಚಾಲಕರ ಜೀವನ ಅವರ ಸಂಪಾದನೆ, ಬವಣೆ, ಅವರ ಸೇವೆಗಳು, ಅದಕ್ಕೆ ಅವರಿಗೆ ದೊರಕುವ ಪ್ರತಿಫಲಗಳು ಎಲ್ಲವನ್ನೂ ಅಧಿಕಾರಿಗಳ, ಜನಪ್ರತಿನಿಧಿಗಳ, ಜನರ ಮುಂದಿಟ್ಟು ರಿಕ್ಷಾ ಚಾಲಕರ ಜೀವನ ಸುಧಾರಣೆಯಾಗುವತ್ತ ಸಮಾಜದ ಚಿಂತನೆ ಬದಲಾಗಲಿ ಎಂಬ ಆಶಯದಿಂದ ಸುದ್ದಿ ಬಿಡುಗಡೆ, ಸುದ್ದಿ ಚಾನೆಲ್ ಈ ಬಾರಿ ಕೆಲಸ ಮಾಡಲಿದೆ. ರಿಕ್ಷಾ ಚಾಲಕರು ರಾಜಕೀಯದ ದಾಳಗಳಾಗದೆ ಈಗಿನಗಿಂತ ಹೆಚ್ಚು ಆರ್ಥಿಕವಾಗಿ ಸ್ವಂತ ಬಲದಿಂದ ಸ್ವಾಭಿಮಾನದ ಗೌರವದ ಬದುಕಿನತ್ತ ಸಾಗುವಂತೆ ಆಗಲಿ.


ಮುಂದಿನ ದಿನಗಳಲ್ಲಿ ರಿಕ್ಷಾ ಚಾಲಕರಂತೆ ಕಡಿಮೆ ಸಂಪಾದನೆಯಿದ್ದರೂ ಹೆಚ್ಚು ಸೇವೆ ನೀಡುವ ಅಂಗನವಾಡಿ ಕಾರ್ಯಕರ್ತೆಯರ, ಆಶಾಕಾರ್ಯಕರ್ತೆಯರ, ಸಂಜೀವಿನಿ ಒಕ್ಕೂಟದ ಸದಸ್ಯರ ಮತ್ತು ಅದೇ ರೀತಿ ಜನ ಸೇವೆ ಮಾಡುವ ಇತರರ ಕಡೆ ಸುದ್ದಿಯ ನಡಿಗೆ ಇರಲಿದೆ. ಸುದ್ದಿ ಬಿಡುಗಡೆ, ಸುದ್ದಿ ಚಾನೆಲ್ ಅವರ ಧ್ವನಿಯಾಗಲಿದೆ.

LEAVE A REPLY

Please enter your comment!
Please enter your name here