ಮಂಗಳೂರು ವಿ.ವಿ ಅಂತರ್ ಕಾಲೇಜು ಈಜು ಸ್ಪರ್ಧೆ: ಆಳ್ವಾಸ್ ವಿದ್ಯಾರ್ಥಿ ಪುತ್ತೂರಿನ ರೋಯ್ಸ್ಟನ್ ರೊಡ್ರಿಗಸ್ ವೈಯಕ್ತಿಕ ಚಾಂಪಿಯನ್

0

ಪುತ್ತೂರು:2022-23ನೇ ಸಾಲಿನ ಮಂಗಳೂರು ವಿ.ವಿ ಅಂತರ್ ಕಾಲೇಜು ಈಜು ಸ್ಪರ್ಧೆಯು ನ.9 ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ ಜರಗಿದ್ದು, ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಬಿಪಿಎಡ್ ವಿದ್ಯಾರ್ಥಿ, ಪುತ್ತೂರಿನ ಪಾಂಗ್ಲಾಯಿ ನಿವಾಸಿ ರೋಯ್ಸ್ಟನ್ ರೊಡ್ರಿಗಸ್ ರವರು  ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ.

ರೋಯ್ಸ್ಟನ್ ರೊಡ್ರಿಗಸ್ ರವರು ಕೂಟದಲ್ಲಿನ ಈಜು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ 3 ಚಿನ್ನ, 4 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸಾಧನೆಯನ್ನು ಮೆರೆದಿದ್ದಾರೆ. ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಇವರು ಮೂರು ಬಾರಿ ವಿ.ವಿ ಚಾಂಪಿಯನ್ ಆಗಿ ಹೊರಹೊಮ್ಮಿರುತ್ತಾರೆ. ಇವರಿಗೆ ಪುತ್ತೂರು ಪರ್ಲಡ್ಕ ಬಾಲವನ ಈಜುಕೊಳದ ತರಬೇತುದಾರರಾದ ಪಾರ್ಥ ವಾರಣಾಶಿ, ನಿರೂಪ್ ಜಿ.ಆರ್, ರೋಹಿತ್, ದೀಕ್ಷಿತ್ ರವರು ತರಬೇತಿ ನೀಡಿರುತ್ತಾರೆ. ರೋಯ್ಸ್ಟನ್ ರೊಡ್ರಿಗಸ್ ರವರು ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎವರೆಸ್ಟ್ ರೊಡ್ರಿಗಸ್ ಹಾಗೂ ಫಿಲೋಮಿನಾ ಕಾಲೇಜಿನ ಆಡಳಿತ ಸಿಬ್ಬಂದಿ ರುಫೀನಾ ಡಿ’ಸೋಜರವರ ಪುತ್ರ.

LEAVE A REPLY

Please enter your comment!
Please enter your name here