ಪುತ್ತೂರು: ತಾಲೂಕು ಆಫೀಸ್ ರಸ್ತೆಯ ಪುತ್ತೂರು ಸೆಂಟರ್ನಲ್ಲಿರುವ ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್ ಹಾಗೂ ಗೃಹಪಯೋಗಿ ಸಾಮಾಗ್ರಿಗಳ ಮಳಿಗೆ ಶೇಟ್ ಇಲೆಕ್ಟ್ರಾನಿಕ್ಸ್ನಲ್ಲಿ ಹಬ್ಬಗಳ ಪ್ರಯುಕ್ತ ಗ್ರಾಹಕರಿಗೆ ನೀಡುವ ಗಿಫ್ಟ್ ಕೂಪನ್ನ 15ನೇ ಬಂಪರ್ ಡ್ರಾ.ವು ನ.11 ರಂದು ನಡೆಸಲಾಯಿತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಬಂಪರ್ ಡ್ರಾ ನಡೆಸಿಕೊಟ್ಟರು. ಬಳಿಕ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬರುತ್ತಿದೆ. ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಲಿ. ಸಂಸ್ಥೆಯು ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು.
ರುಕ್ಸಾನ ಶಾಂತಿನಗರ(AB 1292) ಕಂಬಳಬೆಟ್ಟು ಬಂಪರ್ ಡ್ರಾ ವಿಜೇತರಾದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನ್ಯಾಯವಾದಿ ಚಿದಾನಂದ ಬೈಲಾಡಿ, ಉದ್ಯಮಿಗಳಾದ ಶಿವರಾಮ ಆಳ್ವ, ಜಯಕುಮಾರ್ ನಾಯರ್, ಆರ್ಕಿಟೆಕ್ಟ್ ಸಚ್ಚಿದಾನಂದ, ಕೋ ಆಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಕಿರಣ್ ಕುಮಾರ್ ರೈ ಕಬ್ಬಿನ ಹಿತ್ತಿಲು, ಪ್ರಭಾಕರ ಶೆಟ್ಟಿ ಮಚ್ಚಿಮಲೆ, ವಿಜಯಲಕ್ಷ್ಮೀ ಇಲೆಕ್ಟ್ರಿಕಲ್ಸ್ ನ ಚಂದ್ರಶೇಖರ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪುತ್ತೂರು ಕ್ಲಬ್ನ ಕೋಶಾಧಿಕಾರಿ ದೀಪಕ್ ಕೆ.ಪಿ., ಸಂಸ್ಥೆಯ ಮ್ಹಾಲಕ ರೂಪೇಶ್ ಶೇಟ್, ಮ್ಹಾಲಕರ ತಂದೆ ಶಿವಾನಂದ ಶೇಟ್ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು. ಹಬ್ಬಗಳ ಅಂಗವಾಗಿ ಪ್ರತಿ 2000 ಸಾಮಾಗ್ರಿಗಳ ಖರೀದಿಗೆ ಕೂಪನ್ ನೀಡಲಾಗಿದ್ದು ಅದರ ಬಂಪರ್ ಡ್ರಾವನ್ನು ನಡೆಸಲಾಯಿತು.
ದೀಪಾವಳಿ ಹಬ್ಬದ ಅಂಗವಾಗಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗಿದ್ದು, 30ಇಂಚು ಎಲ್ಇಡಿ ಟಿವಿ ಕೇವಲ ರೂ.9,990 ರೂ.1000 ಕ್ಯಾಶ್ಬ್ಯಾಕ್, ಉಚಿತ ಗಿಫ್ಟ್, 40 ಇಂಚು ಎಲ್ಇಡಿ ಟಿವಿ ಕೇವಲ ರೂ.15990, ರೂ.1000 ಕ್ಯಾಶ್ ಬ್ಯಾಕ್, ಉಚಿತ ಗಿಫ್ಟ್, 43 ಇಂಚು ಎಲ್ಇಡಿ ಟಿವಿ ಕೇವಲ ರೂ.20990, ರೂ.2000 ಕ್ಯಾಶ್ಬ್ಯಾಕ್, ಉಚಿತ ಗಿಫ್ಟ್, ಇಲೆಕ್ಟ್ರಿಕ್ ಗೀಸರ್ ರೂ.2990ರಿಂದ ಪ್ರಾರಂಭ, ರೂ.4990ರ 2 ಬರ್ನರ್ ಗ್ಯಾಸ್ ಸ್ಟವ್ನೊಂದಿಗೆ ಇಂಡಕ್ಷನ್ ಕುಕ್ಕರ್ ಉಚಿತ, ಡಬಲ್ ಡೋರ್ ರೆಫ್ರಿಜರೇಟರ್ಗೆ ಗೀಸರ್ ಉಚಿತ, ಗ್ರೈಂಡರ್ ಖರೀದಿಗೆ ಕುಕ್ಕರ್ ಉಚಿತ, ಮಿಕ್ಸಿಯೊಂದಿಗೆ ಸ್ಮಾರ್ಟ್ ವಾಚು ಉಚಿತ, ರೂ.12490ಕ್ಕೆ ಸಿಂಗಲ್ ಡೋರ್ ರೆಫ್ರಿಜರೇಟರ್, ವಾಟರ್ ಪ್ಯೂರಿಪೈರ್ಗೆ ಶೇ.35ರವರೆಗೆ ರಿಯಾಯಿತಿ, ಸಿಸಿಟಿವಿಗೆ ಶೇ.50ರವರೆಗೆ ರಿಯಾಯಿತಿ, ಫ್ಯಾನ್ಗೆ ಶೇ.35ರವರೆಗೆ ರಿಯಾಯಿತಿ, ಎಸಿ ರೂ.2900ರಿಂದ ಪ್ರಾರಂಭ. ಇಎಮ್ಐಯಲ್ಲಿ ಯಾವುದೇ ವಸ್ತು ಖರೀದಿಗೆ ಸ್ಮಾರ್ಟ್ವಾಚು ಉಚಿತ ನೀಡಲಾಗಿತ್ತು ಸಂಸ್ಥೆಯ ಪ್ರಕಟಣೆ ತಿಳಿಸಿದೆ.