ಬಡಗನ್ನೂರು: ಸುಳ್ಯ ಪದವು ಇಲ್ಲಿನ ಆಯುಧ ಪೂಜಾ ಸೇವಾ ಸಮಿತಿ ವತಿಯಿಂದ 30ನೇ ವರ್ಷದ ಸಾರ್ವಜನಿಕ ಆಯುಧ ಪೂಜೆ,ವಿವಿಧ ಆಟೋಟ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಸುಳ್ಯಪದವು ಪೇಟೆಯಲ್ಲಿ ನಡೆಯಿತು.

ಬೆಳಿಗ್ಗೆ ಶ್ರೀ ಗಣಪತಿ ಹೋಮ,ಶ್ರೀ ಕೃಷ್ಣ ಭಜನಾ ಮಂಡಳಿ, ಮುಡಿಪಿನಡ್ಕ,ಶ್ರೀ ಮಹಾವಿಷ್ಣು ಸಾಂಸ್ಕೃತಿಕ ಕಲಾ ಸಂಘ, ಸುಳ್ಯಪದವು,ಮಿತ್ರ ಭಜನಾರ್ಚನಾ ಸಂಘ, ಬೆಳ್ಳೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.ಕುಳ ತರವಾಡು ಮನೆಯ ಮುಖ್ಯಸ್ಥ ದಾಮೋದರ ಎನ್.ಎ.,ವಿವಿಧ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.
ವಾಹನ ಪೂಜೆ, ಮಹಿಳೆಯರ ಹಗ್ಗಜಗ್ಗಾಟ ಪುರುಷರ ಮ್ಯಾ ಟ್ ಕಬಡ್ಡಿ ಪಂದ್ಯಾಟ ನಡೆಯಿತು. ಮಧ್ಯಾಹ್ನ ಭಜನಾ ಮಂಗಲ, ಮಹಾಪೂಜೆ, ಪ್ರಸಾದ ವಿತರಣೆ,ಪ್ರಸಾದ ಭೋಜನ ನಡೆಯಿತು.
ಸಂಜೆ ನಡೆದ ಬಹುಮಾನ ವಿತರಣೆ ಮತ್ತು ಗೌರವಾರ್ಪಣೆ ಸಭಾ ಕಾರ್ಯಕ್ರಮವು ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿಯ ಅಧ್ಯಕ್ಷ ಗಿರೀಶ್ ಕುಮಾರ್ ಕನ್ನಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ನಿವೃತ್ತ ಆರ್ ಟಿ ಒ ಅಧಿಕಾರಿ ಆನಂದ ಗೌಡ, ಪೆರಾಜೆ ಜ್ಯೋತಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಸುರೇಶ್ ಹೆಗ್ಡೆ ಕುಳದಪಾರೆ ಮಾತನಾಡಿ ಶುಭ ಹಾರೈಸಿದರು.ವೇದಿಕೆಯಲ್ಲಿ ಸೇವಾ ಸಮಿತಿಯ ಗೌರವಾಧ್ಯಕ್ಷ ಶೇಷಪ್ಪ ಕಡಮಗದ್ದೆ ಉಪಸ್ಥಿತರಿದ್ದರು.
ಗೌರವಾರ್ಪಣೆ
ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳೇರಿ ಹಾಗೂ ,ನಿವೃತ್ತ ಸಹಾಯಕ ಪೋಲಿಸ್ ಉಪನಿರೀಕ್ಷಕ ಬಿ. ರವೀಂದ್ರನಾಥ ರೈ ಬೋಳಂಕೂಡ್ಲು ರವರಿಗೆ ಪೇಟ ಧರಿಸಿ, ಸಾಲು,ಹೊದಿಸಿ, ಹಾರಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಾರ್ಪಣೆ ಮಾಡಲಾಯಿತು.ರಾಜೇಶ್ ಸುಳ್ಯಪದವು ಚಂದ್ರಶೇಖರ ಸುಳ್ಯ ಪದವು ಸನ್ಮಾನ ಪತ್ರ ವಾಚಿಸಿದರು.ರಾತ್ರಿ ಚೈತನ್ಯ ಕಲಾವಿದರು ಬೈಲೂರು ಇವರಿಂದ ಅಷ್ಟಮಿ ತುಳು ನಾಟಕ ನಡೆಯಿತು.